ETV Bharat / city

ಮಳೆಗೆ ಮನೆ ಮೇಲ್ಛಾವಣಿ ಕುಸಿತ: ಮಗು ಸಾವು - ಮನೆಯ ಮೇಲ್ಛಾವಣಿ ಕುಸಿದು ಏಳು ವರ್ಷದ ಕಂದಮ್ಮ ಸಾವು

ಎಂದಿನಂತೆ ತಂದೆ-ತಾಯಿಯೊಂದಿಗೆ ನೀಲಮ್ಮ ಕೋಣೆಯಲ್ಲಿ ಮಲಗಿದ್ದಳು. ಶಿಥಿಲಗೊಂಡ ಮೇಲ್ಛಾವಣಿ ಮಳೆಯ ರಭಸಕ್ಕೆ ಕುಸಿದಿದೆ. ದುರಾದೃಷ್ಟ ನೀಲಮ್ಮ ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾಳೆ. ರಾತ್ರಿ ನಗು ನಗುತ್ತ ಪೋಷಕರ ಜೊತೆ ಮಲಗಿದ್ದ ಮಗು ಬೆಳಗ್ಗೆ ಶವವಾಗಿದೆ. ಮಗಳನ್ನು ಕಳೆದುಕೊಂಡ ಕುಟುಂಬದ ಅಕ್ರಂದನ ಮುಗಿಲು ಮುಟ್ಟಿದೆ.

ಮಳೆಗೆ ಮನೆ ಮೇಲ್ಛಾವಣಿ ಕುಸಿತ
ಮಳೆಗೆ ಮನೆ ಮೇಲ್ಛಾವಣಿ ಕುಸಿತ
author img

By

Published : Jun 3, 2021, 3:23 PM IST

ಕಲಬುರಗಿ: ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಏಳು ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ಜೇವರ್ಗಿ ತಾಲ್ಲೂಕಿನಲ್ಲಿ ಬಳೂಂಡಗಿ ಗ್ರಾಮದಲ್ಲಿ ನಡೆದಿದೆ.

home-roof-collapse-7-years-child-death-in-kalaburagi
ಮಳೆಗೆ ಮನೆ ಮೇಲ್ಛಾವಣಿ ಕುಸಿತದಿಂದ ಮಗು ಸಾವು

ನೀಲಮ್ಮ (7) ಮೃತ ಕಂದಮ್ಮ. ಎಂದಿನಂತೆ ತಂದೆ-ತಾಯಿಯೊಂದಿಗೆ ನೀಲಮ್ಮ ಕೋಣೆಯಲ್ಲಿ ಮಲಗಿದ್ದಳು. ಶಿಥಿಲಗೊಂಡ ಮೇಲ್ಛಾವಣಿ ಮಳೆಯ ರಭಸಕ್ಕೆ ಕುಸಿದಿದೆ. ದುರಾದೃಷ್ಟ ನೀಲಮ್ಮ ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾಳೆ.

ಅದೃಷ್ಟವಶಾತ್ ನೀಲಮ್ಮಳ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ನಗು ನಗುತ್ತ ಮಲಗಿದ ಮಗು ಬೆಳಗ್ಗೆ ಸಾವನ್ನಪ್ಪಿರುವುದನ್ನ ಕಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ. ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.