ETV Bharat / city

ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ.. ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳಲು ಬಂದ ಡಿಸಿಗೆ ಅದ್ದೂರಿ ಸ್ವಾಗತ..

'ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ' ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಗ್ರಾಮಕ್ಕೆ ಆಗಮಿಸಿದ್ದಾರೆ..

grama vastavya in Kalburgi
ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳಲು ಬಂದ ಡಿಸಿಗೆ ಅದ್ದೂರಿ ಸ್ವಾಗತ
author img

By

Published : Apr 16, 2022, 2:41 PM IST

ಕಲಬುರಗಿ : ಅಫಜಲಪುರ ತಾಲೂಕಿನ‌ ಆತನೂರ ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇದಕ್ಕೆ ಕಾರಣವಾಗಿದ್ದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ. 'ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ' ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಗ್ರಾಮಕ್ಕೆ ಆಗಮಿಸಿದ್ದಾರೆ. ಸಹಾಯಕ ಅಯುಕ್ತೆ ಮೋನಾ ರೋಟ್, ಅಫಜಲಪೂರ ತಹಶೀಲ್ದಾರ್​ ಸಂಜೀವ ಕುಮಾರ ದಾಸರ, ಡಿಡಿಎಲ್‌ಆರ್‌ ಶಂಕರ್, ಗ್ರಾಮ‌ ಪಂಚಾಯತ್‌ ಅಧ್ಯಕ್ಷೆ ಪಾರ್ವತಿ ಗೊಳಸಾರ ಅವರು ಡಿಸಿ ಅವರನ್ನು ಸ್ವಾಗತಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳಲು ಬಂದ ಡಿಸಿಗೆ ಅದ್ದೂರಿ ಸ್ವಾಗತಕೋರಿದ ಗ್ರಾಮಸ್ಥರು..

ಡಿಸಿ ಮತ್ತು ಸಿಇಒ ಅವರಿಗೆ ಹಣೆಯ ಮೇಲೆ‌ ತಿಲಕವಿಟ್ಟು ಗ್ರಾಮದ‌ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಗ್ರಾಮಕ್ಕೆ ಬರಮಾಡಿಕೊಂಡರು. ಬಳಿಕ ಅಲಂಕೃತ ಎತ್ತಿನ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು. ವೇದಿಕೆ ಸ್ಥಳಕ್ಕೆ ಬರುವ‌ ಮುನ್ನ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅತನೂರ ಮಠದ ಪೂಜ್ಯ ಶ್ರೀ ಷ.ಬ್ರ ಅಭಿನವ ಗುರುಬಸವ ಶಿವಾಚಾರ್ಯರು ಅವರನ್ನು ಸನ್ಮಾನಿಸಿದರು.

ಬಳಿಕ ಗ್ರಾಮ ವಾಸ್ತವ್ಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ಕೋವಿಡ್ ಲಸಿಕೆ ಕಾರ್ಯ ವೀಕ್ಷಿಸಿದರು. ನೂರಾರು‌ ಸಂಖ್ಯೆಯಲ್ಲಿ ಸಾರ್ವಜನಿಕರು ಡಿಸಿ ಅವರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳಲು ಆಗಮಿಸಿದ್ದಾರೆ. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಜಿಲ್ಲಾಡಳಿತ ತಮ್ಮ ಊರಿಗೆ ಬಂದಿದ್ದು ಸಮಸ್ಯೆಗಳು ತೀರುತ್ತವೆ ಎಂಬ ಸಂಭ್ರಮದಲ್ಲಿ ಗ್ರಾಮಸ್ಥರಿದ್ದಾರೆ‌.

ಇದನ್ನೂ ಓದಿ: ಮನೆ ಬಾಗಿಲಿಗೆ ತೆರಳಿದ ಸರ್ಕಾರ: ಸಮಸ್ಯೆ ಮುಂದಿಟ್ಟು ಒಂದಿಷ್ಟು ಪರಿಹಾರ ಪಡೆದ ಸ್ಥಳೀಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.