ETV Bharat / city

ವೀಕೆಂಡ್​ ಕರ್ಫ್ಯೂವಿದ್ದರೂ ಕಲಬುರಗಿ ಮಾರ್ಕೆಟ್​ ಒಪನ್​.. ಹೆಚ್ಚಿನ ಗ್ರಾಹಕರು ಬಾರದಿದ್ದಕ್ಕೆ ವ್ಯಾಪಾರಸ್ಥರು ಕಂಗಾಲು.. - ಕಲಬುರಗಿಯ ವ್ಯಾಪಾರಸ್ಥರ ಮೇಲೆ ಕರ್ಫ್ಯೂ ಎಫೆಕ್ಟ್​

ಸರ್ಕಾರ ಏನೋ ಪದೇಪದೆ ಲಾಕ್​​ಡೌನ್, ಕರ್ಫ್ಯೂ ಜಾರಿ ಮಾಡುತ್ತಿದೆ‌. ಆದರೆ, ಬಡ ವ್ಯಾಪಾರಸ್ಥರ, ಕೂಲಿ ಕಾರ್ಮಿಕರ ಗೋಳು ಕೇಳೋರು ಯಾರು‌‌‌? ಸರ್ಕಾರದಿಂದ ನಮಗೆ ಯಾವುದೇ ನೆರವು ಸಿಕ್ಕಿಲ್ಲ. ಕಳೆದ ಲಾಕ್​ಡೌನ್​ನಲ್ಲಿ ಸಾಲ ಮಾಡಿ ಜೀವನ ಮಾಡಿದ್ದೇವೆ..

curfew effects on kalaburagi vegetable sellers
ಕಲಬುರಗಿಯ ವ್ಯಾಪಾರಸ್ಥರ ಮೇಲೆ ಕರ್ಫ್ಯೂ ಎಫೆಕ್ಟ್​
author img

By

Published : Jan 8, 2022, 2:36 PM IST

ಕಲಬುರಗಿ : ಇಂದು ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದೆ. ಆದ್ರೆ, ಕಲಬುರಗಿಯ ಮಾರುಕಟ್ಟೆ ತೆರೆದಿದ್ದು, ಗ್ರಾಹಕರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ತರಕಾರಿಗಳನ್ನು ಮಾರುಕಟ್ಟೆಗೆ ತಂದಿದ್ದೇವೆ. ಆದ್ರೆ, ಕರ್ಫ್ಯೂ ಹಿನ್ನೆಲೆ ಗ್ರಾಹಕರು ಬಂದಿಲ್ಲ. ತರಕಾರಿ ಮಾರಾಟವಾಗದೇ ಉಳಿದಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಲಬುರಗಿಯ ವ್ಯಾಪಾರಸ್ಥರ ಮೇಲೆ ಕರ್ಫ್ಯೂ ಎಫೆಕ್ಟ್..​

ಕಲಬುರಗಿ ನಗರದ ಕಣ್ಣಿ ಮಾರ್ಕೆಟ್ ಎಂದೇ ಪ್ರಸಿದ್ಧವಾಗಿರುವ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ವ್ಯಾಪಾರಿಗಳು ನಮಗೆ ನಷ್ಟವಾಗುತ್ತಿದೆ ಎಂದು ಈಟಿವಿ ಭಾರತದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ‌.

ಇದನ್ನೂ ಓದಿ: ಎರಡೂವರೆ ವರ್ಷದಲ್ಲಿ ಬಿಜೆಪಿ ಏನು ಕಡಿದು ಕಟ್ಟೆ ಹಾಕಿದೆ ಎಂಬುದರ ಲೆಕ್ಕ ಕೊಡಲಿ : ಸಿದ್ದರಾಮಯ್ಯ

ಸರ್ಕಾರ ಏನೋ ಪದೇಪದೆ ಲಾಕ್​​ಡೌನ್, ಕರ್ಫ್ಯೂ ಜಾರಿ ಮಾಡುತ್ತಿದೆ‌. ಆದರೆ, ಬಡ ವ್ಯಾಪಾರಸ್ಥರ, ಕೂಲಿ ಕಾರ್ಮಿಕರ ಗೋಳು ಕೇಳೋರು ಯಾರು‌‌‌? ಸರ್ಕಾರದಿಂದ ನಮಗೆ ಯಾವುದೇ ನೆರವು ಸಿಕ್ಕಿಲ್ಲ. ಕಳೆದ ಲಾಕ್​ಡೌನ್​ನಲ್ಲಿ ಸಾಲ ಮಾಡಿ ಜೀವನ ಮಾಡಿದ್ದೇವೆ.

ಆ ಸಾಲ ತೀರಿಸಲಾಗದೇ ಇನ್ನೂ ಸಂಕಷ್ಟ ಎದುರಿಸುತ್ತಿದ್ದೇವೆ. ಇದೀಗ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ರೆ ನಮ್ಮ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತದೆ‌. ಕರ್ಪ್ಯೂ ಹಿನ್ನೆಲೆ ತರಕಾರಿ ಖರೀದಿಸಲು ಜನರು ಬರುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.