ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ ಎಂದು ಎಂಎಲ್ಸಿ, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಸಿದ್ದರಾಮಯ್ಯ ಒಬ್ಬ ಶನಿ, ಕಾಂಗ್ರೆಸ್ ಪಕ್ಷವನ್ನ ಮುಗಿಸುವವರೆಗೂ ಆತ ನಿದ್ರೆ ಮಾಡುವುದಿಲ್ಲ ಎಂದಿದ್ದಾರೆ.
ನನ್ನ ಪ್ರಕಾರ ಸಿದ್ದರಾಮಯ್ಯ ಕೇವಲ ಶನಿ ಅಲ್ಲ, ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು. ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ, ಹೊರಗಡೆ ಎಲ್ಲರಿಗೂ ದ್ವೇಷಿಸುವಂತೆ ವರ್ತಿಸುತ್ತಾರೆ. ಒಳಗೊಳಗೆ ಎಲ್ಲರ ಜೊತೆ ವ್ಯವಹಾರ ಮಾತಾಡ್ತಾರೆ. ಅವರಿಗೆ ಶಕುನಿ ಪಾತ್ರ ಮಾಡಿದ್ರೆ ಸೂಟ್ ಆಗುತ್ತೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಚುನಾವಣೆ ಅಧಿಕಾರಿಗಳಿಂದ ದಾಳಿ: ನಗದು ವಶ!