ETV Bharat / city

ಕಲಬುರಗಿ: ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು.. ಅಸಹಾಯಕರಾದ ಜನ, ಜೆಸ್ಕಾಂ ವಿರುದ್ಧ ಆಕ್ರೋಶ - boy died by current shock

ಪಾರ್ಕ್​​ನಲ್ಲಿ ಆಟವಾಡುತ್ತಿರುವಾಗ ವಿದ್ಯುತ್​​ ತಗುಲಿ ಆರು ವರ್ಷದ ಬಾಲಕ ಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

kalaburagi death case
ಕಲಬುರಗಿ ಮೃತ ಪ್ರಕರಣ
author img

By

Published : Sep 30, 2021, 7:14 AM IST

ಕಲಬುರಗಿ: ಪಾರ್ಕ್​​ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಕಲಬುರಗಿ ನಗರದ ಎನ್.ಜಿ.ಓ ಕಾಲೋನಿ ಗಾರ್ಡನ್‌ನಲ್ಲಿ ನಡೆದಿದೆ.

boy died by current shock at kalaburagi
ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಆರು ವರ್ಷದ ಬಾಲಕ ಸಿದ್ದು ಮೃತ ದುರ್ದೈವಿ. ಪಾರ್ಕ್​​ನಲ್ಲಿ ಆಟವಾಡುತ್ತಿರುವಾಗ ವಿದ್ಯುತ್​​ ತಗುಲಿ ಸಾವನಪ್ಪಿದ್ದಾನೆ. ಮಳೆಯಿಂದ ವದ್ದೆಯಾಗಿದ್ದ ಗಾರ್ಡನ್‌ನಲ್ಲಿನ ವಿದ್ಯುತ್ ಕಂಬದಲ್ಲಿ ಕರೆಂಟ್ ಹರಿದಿದೆ. ಆಟವಾಡುತ್ತಿರುವಾಗ ಬಾಲಕ ಕರೆಂಟ್ ಕಂಬಕ್ಕೆ ಜೋತು ಬಿದ್ದಿದ್ದಾನೆ. ಈ ವೇಳೆ ಬಾಲಕ ಸಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ನ್ಯಾಯಾಂಗ ಬಂಧನ

ಜೆಸ್ಕಾಂ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕಣ್ಣೆದುರೇ ಬಾಲಕ ವಿದ್ಯುತ್ ತಗುಲಿ ಸಾವನಪ್ಪುತ್ತಿದ್ದರೂ, ಕಣ್ಣಾರೆ ಕಂಡರೂ ಸಹ ಏನು ಮಾಡಲಾಗದ ಸ್ಥಿತಿ ಎದುರಾದ ಹಿನ್ನೆಲೆ ಜನ ಮರುಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.