ಸೇಡಂ(ಕಲಬುರಗಿ): ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಮಾಲೀಕನ ಕಣ್ಣೆದುರೇ ಹಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕರ್ವಾ ಎಂಬ ಅಂಗಡಿಯ ಮಾಲೀಕ ವ್ಯಾಪಾರ ಮುಗಿದ ಬಳಿಕ ರಾತ್ರಿಯ ವೇಳೆ ಹಣ ಎಣಿಸಿಕೊಳ್ಳುವಾಗ ಗ್ರಾಹಕನಂತೆ ಬಂದ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ.
ರಾತ್ರಿ ಅಂಗಡಿಗೆ ಬಂದ ಚಾಲಾಕಿಯು ಮಾಲೀಕ ಹಣ ಎಣಿಸುತ್ತಿದ್ದಾಗ ಕೆಲವೇ ನೋಡನೋಡುತ್ತಿದ್ದಂತೆ ಕೈಗೆ ಬಂದಷ್ಟು ಹಣವನ್ನು ದೋಚಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿರಂತರವಾಗಿ ಐದಾರು ವರ್ಷಗಳಿಂದ ಪಟ್ಟಣದ ಅನೇಕ ಅಂಗಡಿಗಳಿಗೆ ಕಳ್ಳರು ಕನ್ನ ಹಾಕುತ್ತಲೇ ಇದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರ ಗುಂಪು ತಡರಾತ್ರಿ, ನಸುಕಿನ ಜಾವ ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡುವುದು ಸಾಮಾನ್ಯವಾಗಿದೆ. ಈಗ ಜನನಿಬಿಡ ಪ್ರದೇಶದಲ್ಲೇ, ಜನರ ಕಣ್ಣೆದುರೇ ಹಣ ದೋಚಿ ಪರಾರಿಯಾಗಿರುವುದು ವ್ಯಾಪಾರಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: ಮಹಿಳಾ ಪೊಲೀಸರಿಂದ ಒಂದು ದಿನ ರಾತ್ರಿ ಗಸ್ತು.. ಮೈಸೂರಿನಲ್ಲಿ ವಿನೂತನ ಪ್ರಯೋಗ
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.