ಕಲಬುರಗಿ: ತಾಯಿಯಿಂದ ಸ್ಫೂರ್ತಿ ಪಡೆದ ವಿದ್ಯಾರ್ಥಿನಿಯೊಬ್ಬಳು ಹಾರ್ಮೋನಿಯಂ, ತಬಲಾ, ಗಾಯನ, ಕರಾಟೆ, ಭರತನಾಟ್ಯ ಸೇರಿದಂತೆ 60 ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ಪರಿಣತಿ ಹೊಂದುವ ಮೂಲಕ ಗಮನ ಸೆಳೆದಿದ್ದಾಳೆ.
ಕಲಬುರಗಿಯ 17 ವರ್ಷದ ಆಕಾಂಶ ಪುರಾಣಿಕ್ ಎಂಬ ವಿದ್ಯಾರ್ಥಿನಿ ಹಾರ್ಮೋನಿಯಂ, ತಬಲಾ, ಸಿತಾರ್, ಗಿಟಾರ್ ಸೇರಿದಂತೆ ಮುಂತಾದ ಸಂಗೀತಾ ವಾದ್ಯಗಳನ್ನು ಸಲೀಸಾಗಿ ನುಡಿಸುತ್ತಾಳೆ. ಅಷ್ಟೇ ಅಲ್ಲದೇ, ಗಾಯನ, ಕರಾಟೆ, ಭರತನಾಟ್ಯ ಸೇರಿದಂತೆ 60ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, 5 ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲಳು.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಆಕಾಂಶ ಪುರಾಣಿಕ್, 'ಈ ಸಾಧನೆಗೆ ನನ್ನ ತಾಯಿಯೇ ಸ್ಫೂರ್ತಿ. ನಾನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿದೆ' ಎಂದಳು.
ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಳ್ಳಲು ಬಂದ ಯುವತಿ ಮೇಲೆ ಅತ್ಯಾಚಾರ: ಕೊಚ್ಚಿಯ ಟ್ಯಾಟೂ ಕಲಾವಿದ ಅರೆಸ್ಟ್