ಹುಬ್ಬಳ್ಳಿ : ಆತ ಜೆಸಿಬಿ ಹಾಗೂ ಟೆಂಪೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಮದುವೆಯಾಗಿ ಎರಡು ಮಕ್ಕಳಿದ್ದರೂ ಮತ್ತೊಬ್ಬಳ್ಳ ಮೇಲೆ ಕಣ್ಣು ಬಿದ್ದಿತ್ತು. ಆಕೆಯೆ ಜೊತೆ ಪ್ರೀತಿ-ಪ್ರೇಮ ಎಂದು ಸುತ್ತಾಡ ತೊಡಗಿದ್ದ. ಮೊನ್ನೆಯೂ ಆಕೆ ಫೋನ್ ಮಾಡಿ ಆತನನ್ನು ಮನೆಗೆ ಕರೆಯಿಸಿದ್ದಾಳೆ. ಅಷ್ಟೇ.. ಹಾಗೆ ಹೋದ ಆತ ವಾಪಸ್ ಬಂದಿದ್ದು ಮಾತ್ರ ಹೆಣವಾಗಿ.
ಈ ಘಟನೆ ನಡೆದಿದ್ದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ. ಅಂದಹಾಗೆ ಇಲ್ಲಿ ಭೀಕರವಾಗಿ ಕೊಲೆಯಾಗಿ ಬಿದ್ದಿದ್ದು ಅದೇ ಗ್ರಾಮದ ನಿವಾಸಿ ಮಂಜುನಾಥ ಮರೆಪ್ಪನವರ್ ಎಂದು ಗುರುತಿಸಲಾಗಿದೆ.
ಈ ಕೊಲೆಗೆ ವಿವಾಹೇತರ ಸಂಬಂಧವೇ ಕಾರಣವಂತೆ. ಈ ಮಂಜುನಾಥ ಅದೇ ಗ್ರಾಮದ ಲಕ್ಷ್ಮಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಇಬ್ಬರ ಮಧ್ಯೆ ಪ್ರೀತಿ-ಪ್ರೇಮ ಎಲ್ಲವೂ ಆಗಿತ್ತು. ಇತ್ತ ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದವು.
ಆದರೂ ಮಂಜನಾಥ ಆಕೆಯನ್ನು ಬಿಟ್ಟಿರಲಿಲ್ಲ. ಆಕೆಯೂ ಗಂಡನನ್ನು ಬಿಟ್ಟು ಇವನಿಗಾಗಿ ತವರು ಮನೆಯಲ್ಲಿದ್ದಳಂತೆ. ಇಬ್ಬರ ಈ ವಿವಾಹೇತರ ಸಂಬಂಧ ಊರ ಮಂದಿಗೆಲ್ಲಾ ಗೊತ್ತಾಗಿತ್ತು.
ಓದಿ: ಐಪಿಎಲ್ ಮೆಗಾ ಹರಾಜು.. 19 ರಾಷ್ಟ್ರಗಳ 1,214 ಆಟಗಾರರ ನೋಂದಣಿ; ಯಾವ ರಾಷ್ಟ್ರದಿಂದ ಎಷ್ಟು ಮಂದಿ ಗೊತ್ತಾ?
ಹೀಗಾಗಿ, ಮನೆ ಮರ್ಯಾದೆ ಹೋಗುತ್ತದೆ ಅಂತಾ ಯುವತಿ ಅಣ್ಣ ಬಸವರಾಜ್ ಕುರಡಿಕೇರಿ ಮಂಜುನಾಥಗೆ ವಾರ್ನ್ ಮಾಡಿದ್ದ. ಅಲ್ಲದೇ ಊರ ಹಿರಿಯರ ಸಮ್ಮುಖದಲ್ಲಿಯೂ ರಾಜಿ ಪಂಚಾಯ್ತಿ ಮಾಡಿ ಆಕೆಯನ್ನು ಬಿಟ್ಟುಬಿಡು ಅಂತಾ ಹೇಳಿದ್ದ. ಆದರೆ, ಇವರು ಮಾತ್ರ ಕದ್ದು ಮುಚ್ಚಿ ಸೇರುವುದನ್ನು ಬಿಟ್ಟಿರಲಿಲ್ಲ.
ಇದು ಹೀಗಾದರೂ ನಿಲ್ಲಲ್ಲ ಅಂತಾ ತಿಳಿದ ಬಸವರಾಜ್ ಉಪಾಯವಾಗಿ ತನ್ನ ತಂಗಿಯಿಂದಲೇ ಫೋನ್ ಮಾಡಿಸಿ ಮಂಜನಾಥ್ನನ್ನು ಜನವರಿ 18 ರಂದು ಮನೆಗೆ ಕರೆಯಿಸಿದ್ದಾನೆ. ಅಷ್ಟೇ.. ಅಲ್ಲಿ ಮಾತಿಗೆ ಮಾತು ಬೆಳೆದು ಮನೆಯ ಹಿತ್ತಲಿನಲ್ಲಿ ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ.
ಓದಿ: ಬಲವಂತದ ಮತಾಂತರ ಯತ್ನ ಆರೋಪ.. ಮಾವನ ವಿರುದ್ಧವೇ ದೂರು ಕೊಟ್ಟ ಅಳಿಯ!
ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಕೊಲೆಗಾರ ಬಸವರಾಜನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಲಕ್ಷ್ಮಿ ಹುಬ್ಬಳ್ಳಿ ಬಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಮಂಜುನಾಥ ಟೆಂಪೋದಲ್ಲಿ ನಿತ್ಯ ಆಕೆಯನ್ನು ಪಿಕಫ್ ಡ್ರಾಪ್ ಮಾಡುತ್ತಲೇ ಆಕೆಯನ್ನ ಬಲೆಗೆ ಬೀಳಿಸಿಕೊಂಡಿದ್ದ.
ಮನೆಯಲ್ಲಿ ಹೆಂಡ್ತಿ ಮಕ್ಕಳಿದ್ದರೂ ಮತ್ತೊಬ್ಬಳ ಮೋಹಕ್ಕೆ ಮಂಜುನಾಥ್ ಬಲಿಯಾದ. ಇತ್ತ ಲಕ್ಷ್ಮಿ ಕೂಡ ಮದುವೆಯಾದರೂ ಮಂಜುನಾಥನಿಗೋಸ್ಕರ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿದ್ದಳು. ಎಷ್ಟೇ ಬಾರಿ ರಾಜಿ ಪಂಚಾಯ್ತಿ, ಸಂಧಾನವಾದರೂ ಇಬ್ಬರು ತಮ್ಮ ಸಂಬಂಧ ಬಿಟ್ಟಿರಲಿಲ್ಲ. ಸದ್ಯ ಆಕೆಯ ಫೋನ್ ಕಾಲ್ಗೆ ಕಿವಿಗೊಟ್ಟು ಹೋದವ ಹೆಣವಾಗಿದ್ದಾನೆ.
ಅನೈತಿಕ ಸಂಬಂಧಕ್ಕೆ ಯುವಕ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ. ಇತ್ತ ಗಂಡನಿದ್ದರೂ ಬೇರೆಯವರ ಸಂಗ ಮಾಡಿದ ಮಹಿಳೆ ಸಹೋದರ ಕೋಪಕ್ಕೆ ಬುದ್ದಿ ಕೊಟ್ಟು ಜೈಲು ಪಾಲಾಗಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ