ನವದೆಹಲಿ/ಧಾರವಾಡ: ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದ ರಫೀಕ್ ಹೊಳಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿ ಪಂದ್ಯಾವಳಿಯಲ್ಲಿ ಭಾರತೀಯ ಸೇನೆಯ ಕುಸ್ತಿಪಟು ರಫೀಕ್ ಹೂಳಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. 77 ಕೆಜಿಯ ಗ್ರೀಕೋ ರೋಮನ್ ವಿಭಾಗದಲ್ಲಿ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ನ. 2ರಿಂದ ಮೈಸೂರು-ಬೆಂಗಳೂರು ಮೆಮು ರೈಲು ಸೇವೆ ರದ್ದು ಸೇರಿ ಈ ಎಲ್ಲ ಬದಲಾವಣೆ
ಫೈನಲ್‌ನಲ್ಲಿ ಮಹಾರಾಷ್ಟ್ರದ ಶಿವಾಜಿ ಪಾಟೀಲ ವಿರುದ್ಧ 8-0 ಅಂಕಗಳಿಂದ ರಫೀಕ್ ಗೆದ್ದು ಜಯಶಾಲಿಯಾಗಿದ್ದಾರೆ. ತಾನು ಗೆದ್ದ ಚಿನ್ನದ ಪದಕವನ್ನು ಮೃತಪಟ್ಟ ತಮ್ಮ ತಾಯಿಗೆ ಅರ್ಪಿಸುವುದಾಗಿ ಹೇಳಿದರು.