ETV Bharat / city

ಮದುವೆ ವಿಳಂಬ ಆಗಿದ್ದಕ್ಕೆ ಮನನೊಂದ ಯುವಕ... ಹುಬ್ಬಳ್ಳಿಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ!

ಲಾಕ್‌ಡೌನ್​ನಿಂದ ಮದುವೆ ಮಾಡಲು ಕುಟುಂಬಸ್ಥರು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.

ಮದುವೆ ವಿಳಂಬವಾಗಿದ್ದಕ್ಕೆ ಯುವಕ ಆತ್ಮಹತ್ಯೆ, young man commits suicide in hubli
ಮದುವೆ ವಿಳಂಬ ಆಗಿದ್ದಕ್ಕೆ ಮನನೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
author img

By

Published : May 25, 2020, 1:40 PM IST

ಹುಬ್ಬಳ್ಳಿ: ಕುಟುಂಬಸ್ಥರು ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಮದುವೆ ವಿಳಂಬ ಆಗಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವ್ಯಕ್ತಿ

ಹುಬ್ಬಳ್ಳಿಯ ದೇವಾಂಗಪೇಟೆ ನಿವಾಸಿ ಶರಣಪ್ಪ ಫಕ್ಕೀರಪ್ಪ ಹಡಪದ(29) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತನಿಗೆ ಮದುವೆ ನಿಶ್ಚಯವಾಗಿತ್ತು. ಮನೆಯವರೆಲ್ಲ ಲಾಕ್‌ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಲಾಕ್​ಡೌನ್​ ಮುಂದುವರೆಯುತ್ತಲೇ ಇರುವುದರಿಂದ ತನಗೆ ಬೇಗ ಮದುವೆ ಮಾಡಿ ಎಂದು ಕುಟುಂಬದ ಸದಸ್ಯರೊಂದಿಗೆ ಜಗಳ ಮಾಡಿಕೊಂಡಿದ್ದ. ಬಳಿಕ ಶರಣಪ್ಪ ಶನಿವಾರ ಸಂಜೆ ವೇಳೆ ಮನೆ ಬಿಟ್ಟು ಹೋಗಿದ್ದ ಶರಣಪ್ಪ ಸಂತೋಷ ನಗರದಲ್ಲಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಕೆರೆಯಲ್ಲಿ ಸಂತೋಷನ ಮೃತದೇಹ ಪತ್ತೆಯಾಗಿದ್ದು, ವಿಷಯ ತಿಳಿದು ಅಶೋಕ್​ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.