ETV Bharat / city

ಪತಿಯ ಎರಡನೇ ಮದುವೆಗೆ ಬ್ರೇಕ್ ಹಾಕಿದ ಪತ್ನಿ! - ಧಾರವಾಡ ಲೇಟೆಸ್ಟ್​ ನ್ಯೂಸ್

ಎರಡನೇ ಮದುವೆಗೆ ತಯಾರಾಗಿದ್ದ ಪತಿಯನ್ನು, ಆತನ ಪತ್ನಿ ತರಾಟೆಗೆ ತೆಗೆದುಕೊಂಡ ಘಟನೆ ಧಾರವಾಡ ಕೃಷಿ ವಿವಿ ಆವರಣದಲ್ಲಿನ ದರ್ಗಾದಲ್ಲಿ ನಡೆದಿದೆ.

wife who stopped her husband's second marriage
ಪತಿಯ ಎರಡನೇ ಮದುವೆಗೆ ಬ್ರೇಕ್ ಹಾಕಿದ ಪತ್ನಿ
author img

By

Published : Mar 29, 2021, 9:59 AM IST

ಧಾರವಾಡ: ಎರಡನೇ ಮದುವೆಗೆ ತಯಾರಾಗಿದ್ದ ಪತಿಯನ್ನು, ಆತನ ಪತ್ನಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪತಿಯ ಎರಡನೇ ಮದುವೆಗೆ ಬ್ರೇಕ್ ಹಾಕಿದ ಪತ್ನಿ

ಬೆಳಗಾವಿ ಜಿಲ್ಲೆಯ ಕಿತ್ತೂರು ಮೂಲದ ಡ್ಯಾನಿಷ್ ಮನಿಯಾರ ಎಂಬುವವರಿಗೆ 9 ವರ್ಷದ ಹಿಂದೆಯೇ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ.

ಈ ಮಧ್ಯೆ ಡ್ಯಾನಿಷ್ ಧಾರವಾಡ ಕೃಷಿ ವಿವಿ ಆವರಣದಲ್ಲಿನ ದರ್ಗಾದಲ್ಲಿ ಎರಡನೇ ಮದುವೆಯಾಗಲು ತಯಾರಾಗಿದ್ದ. ಈ ವಿಷಯ ತಿಳಿದ ಆತನ ಪತ್ನಿ, ದರ್ಗಾಗೆ ತೆರಳಿ ಗಲಾಟೆ ನಡೆಸಿದ್ದಾಳೆ. ಈ ವೇಳೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕೆಲಹೊತ್ತು ಜಟಾಪಟಿ‌ ನಡೆಯಿತು.

ಕೂಡಲೇ ಸ್ಥಳಕ್ಕಾಗಮಿಸಿದ ಉಪನಗರ ಠಾಣೆ ಪೊಲೀಸರು, ಡ್ಯಾನಿಷ್ ಮತ್ತು ಆತನ ಪತ್ನಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಓದಿ: ಎರಡು ಬಸ್ ​​- ಲಾರಿ ನಡುವೆ ಡಿಕ್ಕಿ: ಐವರ ದಾರುಣ ಸಾವು.. 25 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.