ETV Bharat / city

ಕಾಂಗ್ರೆಸ್ ಪಕ್ಷ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ: ಪ್ರಹ್ಲಾದ್ ಜೋಶಿ

9 ತಿಂಗಳ ಅವಧಿಯಲ್ಲಿ ನೂರು ಕೋಟಿ‌ ಕೋವಿಡ್​ ಡೋಸ್​ ಕೊಟ್ಟಿದ್ದಕ್ಕೆ ಭಾರತ ಸರ್ಕಾರವನ್ನ ಜಗತ್ತೇ ಕೊಂಡಾಡಿದೆ. ಬಿಲ್ ಗೇಟ್ಸ್ ಸಹಿತ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

author img

By

Published : Oct 23, 2021, 3:45 PM IST

Updated : Oct 23, 2021, 3:58 PM IST

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಒಂದು ದೇಶವಾಗಿ 100 ಕೋಟಿ ವ್ಯಾಕ್ಸಿನ್ ಗುರಿ ಮುಟ್ಟಿದ್ದು ದೊಡ್ಡ ಸಾಧನೆ. ಆದರೆ, ಕಾಂಗ್ರೆಸ್ ಪಕ್ಷವು ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ನಗರದಲ್ಲಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 9 ತಿಂಗಳ ಅವಧಿಯಲ್ಲಿ ನೂರು ಕೋಟಿ‌ ಕೋವಿಡ್​ ಡೋಸ್​ ಕೊಟ್ಟಿದ್ದಕ್ಕೆ ಭಾರತ ಸರ್ಕಾರವನ್ನ ಜಗತ್ತೇ ಕೊಂಡಾಡಿದೆ. ಬಿಲ್ ಗೇಟ್ಸ್ ಸಹಿತ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಇಡೀ ಜಗತ್ತಿನಲ್ಲಿ 700 ಕೋಟಿ ಡೋಸ್​ ವ್ಯಾಕ್ಸಿನ್ ಆಗಿದೆ. ಅದರಲ್ಲಿ 100 ಕೋಟಿ ಭಾರತದ್ದು. ಆದರೆ, ಇಂತಹ (ಕಾಂಗ್ರೆಸ್​) ನಾಯಕರು ಇರುವುದು ನಮ್ಮ ದೇಶದ ದೌರ್ಭಾಗ್ಯ ಎಂದು ಹೇಳಿದರು.

ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಪ್ರಹ್ಲಾದ್ ಜೋಶಿ

ನಾನು ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್​ ನಾಯಕರಿಗೆ ಹೇಳೋದಿಷ್ಟು.. ರಾಹುಲ್ ಗಾಂಧಿ ತರಹ ನೀವು ಆಡಬೇಡಿ. ರಾಹುಲ್ ಗಾಂಧಿಗೆ ಏನೂ ಅರ್ಥ ಆಗಲ್ಲ. ಮೋದಿ ಅವರಿಗೆ ನೀವು ಕ್ರೆಡಿಟ್ ಕೊಡಬೇಕು ಅಂತಾ ನಾವು‌ ಬಯಸಿಲ್ಲ,‌‌ ಸ್ವತಃ ಮೋದಿನೂ ಬಯಸಲ್ಲ. ಆದರೆ ನೀವು ದೇಶಕ್ಕೆ ಕ್ರೆಡಿಟ್​ ಕೊಡಿ ಎಂದರು.

ಕಟೀಲ್ ಮಾತ್ರ ವೈಯಕ್ತಿಕ ನಿಂದನೆ ಮಾಡಿಲ್ಲ

ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್​ ಕಟೀಲ್ ಡ್ರಗ್ ಪೆಡ್ಲರ್ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದ ಜೋಶಿ, ಕಟೀಲ್ ಯಾಕೆ ಈ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ. ಆದರೆ, ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ. ಕೇವಲ ಕಟೀಲ್ ವೈಯಕ್ತಿಕ ನಿಂದನೆ ಮಾಡಿಲ್ಲ. ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. 2014, 2018 ಹಾಗೂ 2019ರ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಹೀನಾಯ ಸೋಲಾಗಿದೆ. ಆದರೂ ಅವರು ಮೋದಿ ಬಗ್ಗೆ ಮಾತಾಡ್ತಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ
ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ

ಗೆಲುವು ಖಚಿತ

ಉಪ ಚುನಾವಣೆಯಲ್ಲಿ ಎರಡೂ ಕಡೆ ನಾವು ಖಂಡಿತ ಗೆಲ್ತೇವೆ. ನಾನು ಹಾನಗಲ್​ಗೆ ಹೋಗಿ ಬಂದಿದ್ದೇನೆ. ಸಿಂದಗಿಗೆ ಹೋಗಿಲ್ಲ. ಅಲ್ಲಿಯ ಕಾರ್ಯಕರ್ತರ ಜೊತೆ, ಉಸ್ತುವಾರಿಗಳ ಜೊತೆ ಸಂಪರ್ಕದಲ್ಲಿ ಇದ್ದೇನೆ. ಪೆಟ್ರೋಲ್ ಡೀಸೆಲ್ ದರ ಚುನಾವಣೆ ಮೇಲೆ ಎಫೆಕ್ಟ್ ಬಿರೋಲ್ಲ. ಆಗಲೂ ನಮಗೆ‌ ಜನ ವೋಟು ಹಾಕಿದ್ದಾರೆ, ‌ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಯಾರು ವಿಶ್ಚಾಸಾರ್ಹರು ಎಂದು ಜನರಿಗೆ ಗೊತ್ತಿದೆ ಎಂದರು.

ಉಪ ಚುನಾಣೆಯಲ್ಲಿ ಹಣ‌ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದು ಸುಳ್ಳು ಆರೋಪ. ಕಾಂಗ್ರೆಸ್​​ನವರು ಸತ್ಯ ಹರಿಶ್ಚಂದ್ರರಾ? ಕಾಂಗ್ರೆಸ್​​ನವರು ಇಷ್ಟೆಲ್ಲಾ ಟೆಂಟ್ ಹಾಕಿದ್ದಾರೆ. ಅವರು ಹಣ ಖರ್ಚೇ ಮಾಡ್ತಿಲ್ವಾ? ಅಗತ್ಯವಿರುವ ದುಡ್ಡು ಅವರು ಖರ್ಚು ಮಾಡುತಿದ್ದಾರೆ, ನಾವು ಮಾಡ್ತಿದೇವೆ ಎಂದರು.

ಬಾಂಗ್ಲಾ ಹಿಂದೂಗಳ ಹಿತ ಕಾಪಾಡಲು ಭಾರತ ಸರ್ಕಾರ ಬದ್ಧ

ಬಾಂಗ್ಲಾ‌ದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಲ್ಲಿನ ಸರ್ಕಾರದ ಜೊತೆ ನಮ್ಮ ಸರ್ಕಾರ‌‌ ಸಂಪರ್ಕದಲ್ಲಿದೆ. ಅಲ್ಲಿಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತ್ತಿದೆ. ಭಾರತ ಸರ್ಕಾರ ಅಲ್ಲಿಯ ಹಿಂದೂಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದರು.

ಕಲ್ಲಿದ್ದಲು ಸ್ವಲ್ಪ ಕೊರತೆಯಾಗಿತ್ತು. ಪ್ರತಿ ದಿನ 2.1 ಮಿಲಿಯನ್ ಪೂರೈಕೆ ಮಾಡುತಿದ್ದೇವೆ. ನಾಲ್ಕು ದಿನಗಳ ಸ್ಟಾರ್ ಇದ್ದು, ಅದು ಪೈಲ್​ ಅಪ್​ ಆಗೋಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

Last Updated : Oct 23, 2021, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.