ETV Bharat / city

ಹುಬ್ಬಳ್ಳಿಯಲ್ಲಿಇಬ್ಬರಿಗೆ ಚಾಕು ಇರಿತ.. ಒಬ್ಬ ಆರೋಪಿ ಅರೆಸ್ಟ್​​

ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಬ್ಲೆಡ್ ಹಾವಳಿ ಶುರುವಾಗಿದೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಬ್ಲೇಡ್​​ನಿಂದ ದಾಳಿ ಮಾಡಿದ್ದರೆ, ಹಣಕಾಸಿನ ವಿಚಾರಕ್ಕೆ ಮತ್ತೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.

hubballi
ಹುಬ್ಬಳ್ಳಿ
author img

By

Published : Aug 16, 2022, 2:17 PM IST

ಹುಬ್ಬಳ್ಳಿ: ನಗರದಲ್ಲಿ ಇಂದು ಒಂದೇ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ಪ್ರಕರಣಗಳು ನಡೆದಿವೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಬ್ಲೇಡ್​​ನಿಂದ ದಾಳಿ ಮಾಡಿದ್ದರೆ, ಹಣಕಾಸಿನ ವಿಚಾರಕ್ಕೆ ಮತ್ತೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ.

ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನಿಗೆ ಅನಿಲ್ ನಾಯಕ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗ್ತಿದೆ. ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಕೈಗೆ ಚಾಕುವಿನಿಂದ ಇರಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್​​ಪೆಕ್ಟರ್ ರಾಘವೇಂದ್ರ ಹಳ್ಳೂರ ಯಶಸ್ವಿಯಾಗಿದ್ದಾರೆ. ಹಳೆ ಹುಬ್ಬಳ್ಳಿಯ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆ ಹುಬ್ಬಳಿಯ ಇಬ್ರಾಹಿಂಪುರದಲ್ಲಿ ಅರ್ಬಾಜ್ ಅಕ್ತರ್ ಎಂಬ ಆಟೋ ಚಾಲಕನ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಲಾಗಿದೆ. ಆಟೋ ಬಾಡಿಗೆ ವಿಷಯಕ್ಕೆ ಜಗಳ ಮಾಡಿ ಇರ್ಫಾನ್ ಎಂಬಾತ ಕುತ್ತಿಗೆ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ. ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರು ಗಾಯಾಳುಗಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸೈಬರ್ ಕ್ರಿಮಿನಲ್‌ಗಳ ನಾಡಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ.. ನಾಲ್ವರ ಬಂಧನ, ಕೋಟಿ ನಗದು ವಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.