ಹುಬ್ಬಳ್ಳಿ: ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹತ್ತಿರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ ತಮ್ಮ ಕಾರಿನಿಂದ ಇಳಿದು ನೀರು ಕೊಟ್ಟು ಉಪಚರಿಸಿದ್ದಾರೆ.
![two-wheeler-accident-kalaghatagi-mla-who-treated-the-injured-person-with-water](https://etvbharatimages.akamaized.net/etvbharat/prod-images/6012513_thum.jpg)
ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದನ್ನು ನೋಡಿದ ಶಾಸಕರು, ತಕ್ಷಣ ತಮ್ಮ ವಾಹನ ನಿಲ್ಲಿಸಿ ವ್ಯಕ್ತಿ ಬಳಿ ತೆರಳಿ ನೀರು ನೀಡಿ ಉಪಚರಿಸಿದ್ದಾರೆ.
ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.