ಹುಬ್ಬಳ್ಳಿ: ಬೀಗ ಮುರಿದು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಫ್ ಅಲಿ (18), ಸಾಧಿಕ್.ಜೆ (18) ಬಂಧಿತ ಆರೋಪಿಗಳು. ಇವರು ಹುಬ್ಬಳ್ಳಿಯ ಸನ್ಮಾನ ಕಾಲೋನಿ, ನಾಗಲಿಂಗ ನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮನೆ ಕಳ್ಳತನ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಆರೋಪಿಗಳಿಂದ 21,82,000 ರೂ. ನಗದು, 660 ಗ್ರಾಂ ಚಿನ್ನ, 190 ಗ್ರಾಂ ಬೆಳ್ಳಿ, ಎರಡು ಮೊಬೈಲ್, ಸೈಕಲ್, ಬೈಕ್ ಸೇರಿದಂತೆ ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ನಗದು ಬಹುಮಾನ ಘೋಷಿಸಿದರು.