ETV Bharat / city

ಬಾಲಕಿಯರ ಮೇಲೆ ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಹುಬ್ಬಳ್ಳಿಯಲ್ಲಿ ಇಬ್ಬರು ಆರೋಪಿಗಳ ‌ಬಂಧನ - ಹುಬ್ಬಳ್ಳಿಯಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ

ಹೊರ ಜಿಲ್ಲೆಯಿಂದ ನಾಪತ್ತೆಯಾಗಿ ಹುಬ್ಬಳ್ಳಿಗೆ ಬಂದಿದ್ದ ಇಬ್ಬರು ಬಾಲಕಿಯರ ಮೇಲೆ ಯುವಕರಿಬ್ಬರು ಅತ್ಯಾಚಾರ ಎಸಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಆರೋಪಿಗಳ ‌ಬಂಧನ
ಆರೋಪಿಗಳ ‌ಬಂಧನ
author img

By

Published : Mar 4, 2022, 10:00 AM IST

ಹುಬ್ಬಳ್ಳಿ: ಜಿಲ್ಲೆಯ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಹೊರ ಜಿಲ್ಲೆಯಿಂದ ಬಂದಂತಹ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುವ ನೆಪದಲ್ಲಿ ಹುಬ್ಬಳ್ಳಿಯ ಯುವಕರಿಬ್ಬರು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ.

ಫೆ.28 ರಂದು ಸಂತ್ರಸ್ತೆಯರು ಹೊರ ಜಿಲ್ಲೆಯಿಂದ ನಾಪತ್ತೆಯಾಗಿ ಹುಬ್ಬಳ್ಳಿಗೆ ಬಂದಿರುತ್ತಾರೆ. ಇವರು ದೇಶಪಾಂಡೆ ನಗರದ ಹತ್ತಿರ ಸುತ್ತಾಡುತ್ತಿದ್ದಾಗ ಅಭಿಷೇಕ್ (27) ಹಾಗೂ ಪ್ರವೀಣ್ (25) ಎಂಬುವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ಸಲುಗೆ ಬೆಳೆಸಿಕೊಂಡು ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿ ಮೂರನೇ ದಿನ ಅತ್ಯಾಚಾರ ಎಸಗಿದ್ದಾರೆ.

ಇದನ್ನೂ ಓದಿ: ಅನ್ಯಧರ್ಮದ ಯುವತಿಯೊಂದಿಗೆ ವಿವಾಹ: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಘಟನೆ ಬಳಿಕ ಸಂತ್ರಸ್ತೆಯೊಬ್ಬಳು ಕೀಚಕನ ಫೋನ್ ಬಳಸಿ ತನ್ನ ಕುಟುಂಬಸ್ಥರಿಗೆ ಈ ದುರ್ಘನೆಯ ಮಾಹಿತಿ ತಿಳಿಸಿ ಉಪನಗರ ಪೊಲೀಸ್​ ಠಾಣೆಗೆ ಬಂದಿದ್ದಾರೆ. ಈ ವೇಳೆ, ಅಭಿಷೇಕ್ ಹಾಗೂ ಪ್ರವೀಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಉಪನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಇನ್ಸ್​​​​ಪೆಕ್ಟರ್​​ ರವಿಚಂದ್ರನ್ ನೇತೃತ್ವದಲ್ಲಿ ಬಾಲಕಿಯರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಪೋಕ್ಸೋ ಕಾಯಿದೆ ಅಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.