ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಮಾರಣಾಂತಿಕ ಸೋಂಕು ಎಂದು ಬಿಂಬಿತವಾಗಿರುವ ಕೋವಿಡ್-19 ರೋಗದ ಭೀತಿ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಇಲಾಖೆ 9 ರೈಲುಗಳನ್ನು ತಾತ್ಕಾಲಿಕವಾಗಿ ಮಾ.31ರವರೆಗೂ ರದ್ದುಗೊಳಿಸಿ ಆದೇಶ ಹೊರಡಿಸಿದೆ.
- ಹುಬ್ಬಳ್ಳಿ-ಬೆಂಗಳೂರು ಸಂಚರಿಸಲಿರುವ ಜನಶತಾಬ್ಧಿ ಎಕ್ಸ್‌ಪ್ರೆಸ್ (12079/12080)
- ಮೈಸೂರು-ಯಲಹಂಕ-ಮೈಸೂರು-ಮಾಲ್ಗುಡಿಗೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್ (16023/16024)
- ಯಶವಂತಪುರ-ಪಾಂಡವಪುರಕ್ಕೆ ಸಂಚರಿಸುವ ಯಶವಂತಪುರ ಎಕ್ಸ್‌ಪ್ರೆಸ್ (16541/16542),
- ಬೆಂಗಳೂರು-ಮೈಸೂರು ಸಂಚರಿಸುವ ರಾಜಾರಾಣಿ ಎಕ್ಸ್‌ಪ್ರೆಸ್ (16557/16558)
- ಶಿವಮೊಗ್ಗ-ಯಶವಂತಪುರ ಸಂಚರಿಸುವ ವಿಕ್ಲಿ ಎಕ್ಸ್‌ಪ್ರೆಸ್ (06539/06540 ನಾಲ್ಕು ದಿನಕ್ಕೊಮ್ಮೆ ಸಂಚಾರ)
- ಮೈಸೂರು-ರೆಣುಗುಂಟಾ ಸಂಚರಿಸುವ ಮೈಸೂರು ಎಕ್ಸ್‌ಪ್ರೆಸ್ (11065/11066)
- ಸಾಯಿನಗರ-ಶಿರಡಿ ಸಂಚರಿಸುವ ಮೈಸೂರು ಎಕ್ಸ್‌ಪ್ರೆಸ್ (16217/16218)
- ಯಶವಂತಪುರ-ಮೈಸೂರು ಸಂಚರಿಸುವ ಯಶವಂತಪುರ ವಿಕ್ಲಿ ಎಕ್ಸ್‌ಪ್ರೆಸ್ (16565/16566)
- ಬೆಳಗಾವಿ-ಮೈಸೂರು ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ (17326), (17325)