ETV Bharat / city

ರಾಜ್ಯದಲ್ಲಿ ಭಾನುವಾರದ ಲಾಕ್​ಡೌನ್ ಹಂಗೂ ಇತ್ತು ಹಿಂಗೂ ಇತ್ತು..

ಭಾನುವಾರದ ಲಾಕ್​ಡೌನ್​ ವಿಧಿಸಿರುವ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬಹುತೇಕ ಜಿಲ್ಲೆಗಳು ಸ್ತಬ್ಧವಾಗಿದ್ದವು. ಆದರೆ, ಕೆಲ ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್​ಗೆ ಜನರು ಕ್ಯಾರೇ ಅಂದಿಲ್ಲ..

total-report-of-karnataka-sunday-lock-down
ಭಾನುವಾರದ ಲಾಕ್​ಡೌನ್
author img

By

Published : Jul 19, 2020, 6:12 PM IST

ಬೆಂಗಳೂರು : ರಾಜ್ಯಾದ್ಯಂತ ಜನರ ಉತ್ತಮ ಪ್ರತಿಕ್ರಿಯೆಯಿಂದ ಭಾನುವಾರದ ಲಾಕ್​ಡೌನ್​ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಯಾವುದೇ ನಿರ್ಬಂಧವಿಲ್ಲದೆ, ಅನಗತ್ಯ ವಾಹನ ಸಂಚಾರ ಮಾಡುತ್ತಿದ್ದ ವ್ಯಕ್ತಿಗಳಿಗೆ ಬಿಸಿ ಮುಟ್ಟಿಸಿದ ಹಲವು ಘಟನೆ ರಾಜ್ಯದಲ್ಲಿ ವರದಿಯಾಗಿದೆ. ಅಲ್ಲದೆ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್​ಗೆ ಕ್ಯಾರೇ ಎನ್ನದ ಜನರು ಬೀದಿಗಿಳಿದಿರೋದು ಕಂಡು ಬಂತು.

total-report-of-karnataka-sunday-lock-down
ರವಿವಾರ ಲಾಕ್​ಡೌನ್ ವೇಳೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌

ಲಾಕ್​ಡೌನ್​ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ : ನಗರದಲ್ಲಿ ಭಾನುವಾರದ ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೈಕ್​ ಸಂಚಾರ ಹೊರತುಪಡಿಸಿದ್ರೆ ಎಂಜಿ ಮಾರ್ಕೇಟ್, ಜನತಾ ಬಜಾರ್ ಸೇರಿ ಇತರ ಮಾರುಕಟ್ಟೆಗಳು, ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಕೇಶ್ವಾಪುರ, ಗೋಕುಲ ರಸ್ತೆ ಸೇರಿ ಕೆಲವೆಡೆ ಬೈಕ್​ಗಳನ್ನು ವಶಪಡಿಸಿಕೊಂಡ್ರೆ, ಇನ್ನೂ ಕೆಲವೆಡೆ ಸ್ಥಳದಲ್ಲಿಯೇ ದಂಡ ವಿಧಿಸಿ ರಸ್ತೆಗೆ ಇಳಿಯದಂತೆ ಪೊಲೀಸರು ಎಚ್ಚರಿಕೆ ನೀಡಿ ಕೈಬಿಟ್ಟರು. ಪೆಟ್ರೋಲ್ ಬಂಕ್​ಗಳು ತೆರೆದಿದ್ರೂ ಬಂಕ್​ಗಳಿಗೆ ಬರುವ ವಾಹನಗಳ ಸಂಖ್ಯೆ ವಿರಳವಾಗಿತ್ತು.

ಶಿವಮೊಗ್ಗ ಮಾಂಸ ಖರೀದಿಗೆ ನಿಂತ ಜನ

ಮಾಂಸ ಖರೀದಿಗೆ ಸಾಲುಗಟ್ಟಿ ನಿಂತ ಜನ : ನಗರದಲ್ಲಿ ಸಂಡೇ ಲಾಕ್‌ಡೌನ್‌ ಇದ್ದರೂ ಸಹ ಜನರು ಮಾತ್ರ ಮಾಂಸ ಖರೀದಿಗೆ ಅಂಗಡಿಗಳ ಮುಂದೆ ಸಾಲು ಗಟ್ಟಿ ನಿಂತಿದ್ದರು. ಕೊರೊನಾ ವೈರಸ್​ನ ಲೆಕ್ಕಿಸದೇ ಚಿಕನ್, ಮಟನ್ ಖರೀದಿಗಾಗಿ ವಾಹನಗಳಲ್ಲಿ ಬರುತ್ತಿರುವುದರಿಂದ ಜೈಲ್ ರೋಡ್ ಜನ ಸಂದಣಿಯಿಂದ ಕೂಡಿದೆ. ಪೊಲೀಸರು ಸಹ ಮುಂದೆ ನಿಂತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹಾಗೂ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚಿಸುತ್ತಿರುವುದು ಕಂಡು ಬಂತು.

ಮೈಸೂರು ಸಂಡೇ ಲಾಕ್​ಡೌನ್​

ಲಾಕ್‌ಡೌನ್​ಗೆ ಮೈಸೂರು ಸ್ತಬ್ಧ : ಲಾಕ್​ಡೌನ್​ಗೆ ಮೈಸೂರು ನಗರದ ವಾಣಿಜ್ಯ ಕೇಂದ್ರಗಳಾದ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ, ದೇವರಾಜ ಮಾರುಕಟ್ಟೆ, ಎಪಿಎಂಪಿ‌ ಸೇರಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವಾಹನ ಸಂಚಾರಕ್ಕೆ ನಿರ್ಬಂಧ ಹೇರಿಕೆ ಮಾಡಿರುವುದರಿಂದ, ಕೆಲವರು ಬೈಕ್​ ಸವಾರರು ಖಾಲಿ ಖಾಲಿ ರಸ್ತೆಗಳ ಫೋಟೋ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು.

ರಾಮನಗರ ಭಾನುವಾರದ ಲಾಕ್​ಡೌನ್​

'ರಾಮನಗರ'ದಲ್ಲಿಲ್ಲ ಲಾಕ್​ಡೌನ್‌ಗೆ ರೆಸ್ಪಾನ್ಸ್: ಭಾನುವಾರದ ಲಾಕ್​ಡೌನ್​ಗೆ ರಾಮನಗದ ಜನರು ಕ್ಯಾರೇ ಎನ್ನುತ್ತಿಲ್ಲ. ಅನಗತ್ಯವಾಗಿ ವಾಹನ ಸವಾರರು ಬೀದಿಗಿಳಿದಿದ್ದರೂ ಸಹ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಕಳೆದ ಎರಡು ವಾರದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, 3ನೇ ವಾರದ ಲಾಕ್‌ಡೌನ್​ಗೆ ತಲೆಕೆಡಿಸಿಕೊಳ್ಳದ ಸಾರ್ವಜನಿಕರು ಬೀದಿಗಿಳಿದಿದ್ದಾರೆ.

ಚಿಕ್ಕೋಡಿ ಲಾಕ್​ಡೌನ್​

ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ : ಚಿಕ್ಕೋಡಿಯಲ್ಲಿ ಭಾನುವಾರದ ಲಾಕ್​ಡೌನ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಸ್ತುಗಳ ಮಾರಾಟ ಮಳಿಗೆ ಹೊರತು ಪಡಿಸಿ ಎಲ್ಲವೂ ಬಂದ್​ ಆಗಿದ್ದವು. ಆದರೆ, ಜನರ ಓಡಾಟ ಮಾತ್ರ ನಡೆಯುತ್ತಿದೆ. ಪೊಲೀಸರು ಕೋವಿಡ್​ ತಪಾಸಣೆ ಮಾಡಿ ಬಿಡುತ್ತಿದ್ದಾರೆ. ವಾಹನ ಸಂಚಾರ ಹೆಚ್ಚಾಗಿದೆ.

ಕಾರವಾರ ಭಾನುವಾರದ ಲಾಕ್​ಡೌನ್​

ಉತ್ತರಕನ್ನಡದಲ್ಲಿ ವ್ಯಾಪಕ ಬೆಂಬಲ : ಜಿಲ್ಲಾ ಕೇಂದ್ರ ಕಾರವಾರ, ಅಂಕೋಲಾ ಸೇರಿ ಬಹುತೇಕ ತಾಲೂಕುಗಳಲ್ಲಿ 3ನೇ ವಾರದ ಸಂಡೆ ಲಾಕ್​ಡೌನ್​ಗೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾರವಾರದಲ್ಲಿ ಅಂಗಡಿ-ಮುಂಗಟ್ಟು ಬಂದ್ ಆಗಿವೆ. ಖಾಸಗಿ ವಾಹನ ಸಂಚಾರ ಕೂಡ ಸ್ಥಗಿತಗೊಂಡಿದೆ. ಕೇವಲ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಮಾತ್ರ ತೆರೆಯಲಾಗಿದೆ. ಆದರೂ ಅಲ್ಲಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಿ ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ.

ಸುರಪುರ ಭಾನುವಾರದ ಲಾಕ್​ಡೌನ್​

ಸುರಪುರದಲ್ಲಿ ಹೊರ ಬಂದವರಿಗೆ ದಂಡದ ರುಚಿ : ನಗರದಲ್ಲಿ ಇಂದು ಮೊದಲ ಬಾರಿಗೆ ಪೆಟ್ರೋಲ್​ ಬಂಕ್​ಗಳು ಕೂಡ ಬಂದ್​ ಮಾಡಿದ್ದು ವಿಶೇಷವಾಗಿತ್ತು. ಉಳಿದಂತೆ ಗಸ್ತು ಸುತ್ತುತ್ತಿದ್ದ ಪೊಲೀಸರು ಹೊರಗಡೆ ಬಂದವರಿಗೆ ಲಾಠಿ ರುಚಿ ತೋರಿಸಿದರು. ಅನಗತ್ಯವಾಗಿ ಸುತ್ತುತ್ತಿದ್ದ 30ಕ್ಕೂ ಹೆಚ್ಚು ಬೈಕ್​ ಸವಾರರಿಗೆ ದಂಡ ವಿಧಿಸಿದರು. ಇನ್ನು, ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲ ಬೈಕ್‌ಗಳನ್ನು ಸೀಜ್ ಮಾಡಲಾಯಿತು ಹಾಗೂ ಪ್ರತಿ ಬೈಕ್‌ಗೂ 500 ರೂ. ದಂಡ ವಿಧಿಸಿ ಹೊರ ಬರದಂತೆ ಎಚ್ಚರಿಸಿದರು.

ಲಿಂಗಸುಗೂರು ಭಾನುವಾರದ ಲಾಕ್​ಡೌನ್​

ರಾಯಚೂರು ಗ್ರಾಮೀಣ ಪ್ರದೇಶದಿಂದಲೂ ಉತ್ತಮ ಬೆಂಬಲ : ಜಿಲ್ಲೆಯಾದ್ಯಂತ ಭಾನುವಾರದ ಲಾಕ್​ಡೌನ್​ಗೆ ಪಟ್ಟಣಗಳು ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ನಗರದ ಪ್ರಮುಖ ವೃತ್ತಗಳು ಸೇರಿ ಲಿಂಗಸುಗೂರು, ಸಿಂಧನೂರು, ಮಾನ್ವಿ, ದೇವದುರ್ಗ, ಮಸ್ಕಿ, ಸಿರವಾರ ತಾಲೂಕು ಕೇಂದ್ರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ. ಕೆಲವೆಡೆ ಸಣ್ಣಪುಟ್ಟ ಅಂಗಡಿ ತೆರೆದ ಮಾಲೀಕರಿಗೆ ದಂಡ ವಿಧಿಸಿದ್ದು ಕಂಡು ಬಂತು. ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ಹೈ ಅಲರ್ಟ್‌ ಆಗಿದ್ದು ಅನಗತ್ಯ ತಿರುಗಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸಿದ್ದಾರೆ.

ಸೇಡಂ ಭಾನುವಾರದ ಲಾಕ್​ಡೌನ್​

'ಸೇಡಂ' ಸಂಪೂರ್ಣ ಸ್ತಬ್ಧ : ರಾಜ್ಯ ಸರ್ಕಾರ ಜುಲೈ 20ರವರೆಗೆ ಲಾಕ್‌ಡೌನ್ ವಿಧಿಸಿ ಆದೇಶ ಹೊರಡಿಸಿದೆ. ಆದರೆ, ಪ್ರತಿ ಶನಿವಾರ ಪೂರ್ಣ ಪ್ರಮಾಣದ ಕರ್ಫ್ಯೂ ಹಿನ್ನೆಲೆ ಸೇಡಂ ಪಟ್ಟಣ ಸಂಪೂರ್ಣ ನಾಕಾಬಂಧಿ ಮಾಡಲಾಗಿದೆ. ರವಿವಾರ ಪಟ್ಟಣದ ಪ್ರತಿ ರಸ್ತೆಯನ್ನು ಬಂದ್ ಮಾಡಿರುವ ಪೊಲೀಸರು ವಾಹನ ಸಂಚಾರ, ವ್ಯಾಪಾರಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ. ಇದರಿಂದ ಇಡೀ ಪಟ್ಟಣ ಸ್ತಬ್ಧವಾಗಿದೆ. ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಲ್ಲದೆ ಪ್ರಮುಖ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನ ನೇಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.