ಹುಬ್ಬಳ್ಳಿ: ಲಾಕ್ ಡೌನ್ ಪರಿಣಾಮ ತಮ್ಮ ಊರುಗಳಿಗೆ ಹೊರಟಿರುವ ರಾಜಸಅಥಾನ ಮೂಲದ ಕಾರ್ಮಿಕರನ್ನು ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ಗೆ ಒಳಪಡಿಸಲಾಯಿತು.
12 ಬೈಕ್ಗಳಲ್ಲಿ 24 ಜನ ಕಾರ್ಮಿಕರು ರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಹೀಗೆ ಮಾರ್ಗ ಮಧ್ಯೆ ಹುಬ್ಬಳ್ಳಿಯಲ್ಲಿ ಸಿಕ್ಕ ಇವರಿಗೆ ಹುಬ್ಬಳ್ಳಿ ಡಿ.ಸಿ.ಪಿ. ಬಸರಗಿ ಅವರು ಯೋಗಕ್ಷೇಮ ವಿಚಾರಿಸಿ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.