ETV Bharat / city

ಉತ್ತರ ಕರ್ನಾಟಕ ಭಾಗದಲ್ಲಿ ಸದ್ಯ ಮಳೆ ಇಲ್ಲ: ಹವಾಮಾನ ತಜ್ಞರ ಮಾಹಿತಿ

ಸದ್ಯ ಮಳೆ ಮಾರುತಗಳು ಮಹಾರಾಷ್ಟ್ರದತ್ತ ಚಲನೆ ಮಾಡಿವೆ. ಹೀಗಾಗಿ ನಮ್ಮ ಭಾಗದಲ್ಲಿ ಸದ್ಯಕ್ಕೆ ಮಳೆ ಇಲ್ಲ ಎಂದು ಹವಾಮಾನ ತಜ್ಞ ಡಾ.ಆರ್.ಎಚ್.ಪಾಟೀಲ ಸ್ಪಷ್ಟಪಡಿಸಿದರು.

Dr RH Patil
ಹವಾಮಾನ ತಜ್ಞ ಡಾ.ಆರ್.ಹೆಚ್.ಪಾಟೀಲ
author img

By

Published : Dec 2, 2021, 12:54 PM IST

ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಆತಂಕ ಇಲ್ಲ ಎಂದು ಹವಾಮಾನ ತಜ್ಞ ಡಾ.‌ಆರ್.ಹೆಚ್. ಪಾಟೀಲ‌ ಮಾಹಿತಿ ನೀಡಿದ್ದಾರೆ.

ಹವಾಮಾನ ತಜ್ಞ ಡಾ.ಆರ್.ಹೆಚ್.ಪಾಟೀಲ

ಈ‌ ಕುರಿತು ಮಾತನಾಡಿರುವ ಅವರು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿತ್ತು. ಅದರ ಮಾರುತಗಳು ಉತ್ತರಮುಖ ಚಲನೆ ಹೊಂದಿದ್ದವು. ಅದರಿಂದ ರಾತ್ರಿ ಮತ್ತು ಬೆಳಗ್ಗೆ ಮಳೆಯಾಗಿತ್ತು. ಆದರೆ ನಾಳೆ (ಶುಕ್ರವಾರ) ಯಾವುದೇ ಮಳೆ ಲಕ್ಷಣ ಇಲ್ಲ. ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಇರಲಿದೆ. ಸದ್ಯ ಮಳೆ ಮಾರುತಗಳು ಮಹಾರಾಷ್ಟ್ರದತ್ತ ಚಲನೆ ಮಾಡಿವೆ. ಹೀಗಾಗಿ ನಮ್ಮ ಭಾಗದಲ್ಲಿ ಸದ್ಯಕ್ಕೆ ಮಳೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡಿ. 3ರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಲಿದ್ದು, ಚಂಡಮಾರುತ ಆಗುವ ಲಕ್ಷಣ ಇದೆ‌. ಅದು‌ ಪಶ್ಚಿಮೋತ್ತರವಾಗಿ ಚಲಿಸಲಿದೆ. ಹೀಗಾಗಿ ಅದರ ಬಾಧೆ ಕರ್ನಾಟಕಕ್ಕೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Watch: ಉತ್ತರಾಖಂಡದಲ್ಲಿ ಚಳಿಗೆ ಹೆಪ್ಪುಗಟ್ಟಿದ ಜಲಪಾತಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.