ಹುಬ್ಬಳ್ಳಿ: ಬೀಗ ಹಾಕಿದ ಮನೆಯ ಡೋರ್ ಲಾಕ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಕೇಶ್ವಾಪುರದ ಮಥುರಾ ಎಸ್ಟೇಟ್ನಲ್ಲಿ ನಡೆದಿದೆ.
ಫೆ. 27 ರಂದು ಸುನೀತಾ ರಾಮಚಂದ್ರ ನಾಯ್ಕ ಎಂಬುವವರು ಮನೆಗೆ ಬೀಗ ಹಾಕಿ ತವರು ಮನೆಗೆ ಹೋಗಿದ್ದರು. ಆ ಸಂದರ್ಭ ಮನೆಯ ಇಂಟರ್ ಲಾಕ್ ಮುರಿದು ಒಳ ಪ್ರವೇಶಿಸಿದ ಕಳ್ಳರು, ಬೆಡ್ ರೂಮಿನ ತಿಜೋರಿ ಒಳಗಿದ್ದ 30 ಸಾವಿರ ರೂ. ನಗದು, 2 ಬಂಗಾರದ ಬಳೆ, ನೆಕ್ಲೆಸ್ ಸೇರಿದಂತೆ ಒಟ್ಟು 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.