ಹುಬ್ಬಳ್ಳಿ : ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಪರವಾಗಿ ಬಂದಿವೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೊಮ್ಮೆ ಆಡಳಿತಕ್ಕೆ ಬರುವುದು ಖಚಿತ ಎಂದು ಸಂಸದ ಪ್ರಹ್ಲಾದ್ ಜೋಶಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರ ನಡೆಸಿದವರ ಪರವಾಗಿ ಆಡಳಿತ ಪರ ಅಲೆ ನಿರ್ಮಾಣವಾಗಿದೆ. ನನಗೆ ತಿಳಿದ ಹಾಗೆ ಕಳೆದ ಸಲಕ್ಕಿಂತ ಒಳ್ಳೆಯ ಬಹುಮತದಲ್ಲಿ ಗೆಲ್ಲುತ್ತೇವೆ ಎಂದರು.
ನಮ್ಮ ಆಡಳಿತದಲ್ಲಿ ಅತ್ಯುತ್ತಮ ಯೋಜನೆಗಳನ್ನು ನರೇಂದ್ರ ಮೋದಿ ಅವರು ರೂಪಿಸಿದ್ದರು. ಈಗ ಮತ್ತೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಆ ಯೋಜನೆಗಳು ಮುಂದುವರೆಯಲಿವೆ ಎಂಬ ವಿಶ್ವಾಸ ನನಗೆ ಇದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.