ETV Bharat / city

ವಾಮಮಾರ್ಗದಿಂದ ಬಿಜೆಪಿ ಅಧಿಕಾರ ಹಿಡಿಯಲು ಹೊರಟಿದೆ: ಬಸವರಾಜ್ ರಾಯರೆಡ್ಡಿ - undefined

ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮೇಶ್​ ಕುಮಾರ್​ ಅಂಗೀಕಾರ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ. ಸಂವಿಧಾನ ಸ್ಪೀಕರ್ ಅವರಿಗೆ ನೀಡಿರುವ ಕಾನೂನುಗಳನ್ನು ಅವರು ಪಾಲಿಸುತ್ತಾರೆ. ವಿಪ್ ಉಲ್ಲಂಘಿಸಿದ್ರೆ ಶಾಸಕರ ಸದಸ್ಯತ್ವ ರದ್ದಾಗುತ್ತದೆ. ಸೋಮವಾರದ ಒಳಗೆ ಎಲ್ಲ ಶಾಸಕರು ವಾಪಸ್ ಬರಲೇಬೇಕು, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

ಬಸವರಾಜ್ ರಾಯರೆಡ್ಡಿ
author img

By

Published : Jul 12, 2019, 2:38 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಶಾಸಕರ ರಾಜೀನಾಮೆ ಡೊಂಬರಾಟ ಶುರುವಾಗಿದೆ. ಬಿಜೆಪಿ ಪಕ್ಷ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಆರೋಪಿಸಿದ್ದಾರೆ.

ಶಾಸಕರ ರಾಜೀನಾಮೆ ಕುರಿತು ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯೆ

ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮೇಶ್​ ಕುಮಾರ್​ ಅವರು ಅಂಗೀಕರಿಸುವುದಿಲ್ಲ ಎಂಬ ವಿಶ್ವಾಸವಿದೆ. ಸಂವಿಧಾನ ಸ್ಪೀಕರ್ ಅವರಿಗೆ ನೀಡಿರುವ ಕಾನೂನುಗಳನ್ನು ಅವರು ಪಾಲಿಸುತ್ತಾರೆ.
ವಿಪ್ ಉಲ್ಲಂಘಿಸಿದರೆ ಶಾಸಕರ ಸದಸ್ಯತ್ವ ರದ್ದಾಗುತ್ತದೆ. ಸೋಮವಾರದೊಳಗೆ ಎಲ್ಲ ಶಾಸಕರು ವಾಪಸ್ ಬರಲೇಬೇಕು, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದರು‌.

ಇನ್ನು ವಾಮಮಾರ್ಗದಿಂದ ಬಿಜೆಪಿ ಅಧಿಕಾರ ಹಿಡಿಯಲು ಹೊರಟಿದೆ. ರಾಜಕೀಯದ ಅನೈತಿಕ ಚಟುವಟಿಕೆಗೆ ಬಿಜೆಪಿ ಹೈಕಮಾಂಡ್ ಕುಮ್ಮಕ್ಕು ನೀಡುತ್ತಿದೆ. ಶಾಸಕರು ಬರದೇ ಇದ್ದರೆ ಕಾಂಗ್ರೆಸ್ ಪಕ್ಷ ಹೇಬಿಯಸ್ ಕಾರ್ಪಸ್ ಮೊರೆ ಹೋಗಲಿದೆ ಎಂದರು.

ವಿಧಾನಸೌಧದಲ್ಲಿ ಡಾ. ಸುಧಾಕರ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ ಅವರು,, ಅವರ ಕೊರಳ ಪಟ್ಟಿಯನ್ನು ಯಾರು ಹಿಡಿದಿಲ್ಲ, ಒಂದು ವೇಳೆ ಹಿಡಿದಿದರೆ ತಪ್ಪು. ಒಂದು ವೇಳೆ ಹಿಡಿದಿದ್ರೆ ಕ್ರಿಮಿನಲ್‌ ಕೇಸ್ ಹಾಕಲಿ ಎಂದರು. ಪ್ರೀತಿ ಸ್ನೇಹದ ಮೇಲೆ ಕರೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಸಮರ್ಥಿಸಿಕೊಂಡರು.

Intro:ಹುಬ್ಬಳ್ಳಿ-02

ರಾಜ್ಯದಲ್ಲಿ ಶಾಸಕರ ರಾಜೀನಾಮೆ ಡೊಂಬರಾಟ ಶುರುವಾಗಿದೆ. ಬಿಜೆಪಿ ಪಕ್ಷ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಅವಣಿಸುತ್ತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮೇಶ ಕುಮಾರ ಅವರು ಅಂಗೀಕಾರ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ. ಸಂವಿಧಾನ ಸ್ಪೀಕರ್ ಅವರಿಗೆ ನೀಡಿರುವ ಕಾನೂನುಗಳನ್ನು ಅವರು ಪಾಲೋ ಮಾಡುತ್ತಾರೆ.
ವಿಪ್ ಉಲ್ಲಂಘನೆ ಮಾಡಿದರೆ ಶಾಸಕರ ಸದಸ್ಯತ್ವ ರದ್ದಾಗುತ್ತದೆ
ಸೋಮವಾರದ ಒಳಗೆ ಎಲ್ಲ ಶಾಸಕರು ವಾಪಸ್ ಬರಲೇಬೇಕು, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ‌.
ವಾಮಮಾರ್ಗದಿಂದ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದು ಕುಳಿತಿದೆ, ರಾಜಕೀಯ ಅನೈತಿಕ ಚಟುವಟಿಕೆಗೆ ಬಿಜೆಪಿ ಹೈಕಮಾಂಡ್ ಕುಮ್ಮಕ್ಕು ನೀಡುತ್ತಿದೆ. ಶಾಸಕರು ಬರದೇ ಇದ್ದರೇ, ಕಾಂಗ್ರೆಸ್ ಪಕ್ಷ ಹೇಬಿಯಸ್ ಕಾರ್ಪಸ್ ಮೊರೆ ಹೋಗಲಿದೆ ಎಂದರು.
ವಿಧಾನಸೌಧದಲ್ಲಿ ಡಾ. ಸುಧಾಕರ್ ಅವರ
ಕೊರಳ ಪಟ್ಟಿ ಹಿಡಿದು ಎಳೆದಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು ಅವರು, ಅವರ ಕೊರಳ ಪಟ್ಟಿಯನ್ನು ಯಾರು ಹಿಡಿದಿಲ್ಲ. ಒಂದು ವೇಳೆ ಹಿಡಿದಿದರೆ ತಪ್ಪು. ಒಂದು ವೇಳೆ ಹಿಡಿದಿದ್ರೆ ಕ್ರಿಮಿನಲ್‌ ಕೇಸ್ ಹಾಕಲಿ ಎಂದರು. ಪ್ರೀತಿ ಸ್ನೇಹದ ಮೇಲೆ ಕರೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಸಮರ್ಥಿಸಿಕೊಂಡರು.
ಬೈಟ್- ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವBody:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.