ಧಾರವಾಡ: ಮಕ್ಕಳು ಶಾಲೆಗೆ ಏಕೆ ಬರ್ತಾರೆ? ಏನಾದರೂ ಕಲಿಯಲು ತಾನೆ, ಹಾಗಾದ್ರೆ ಗುರು ಆದವರು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕಲ್ವೆ? ಶಿಕ್ಷಕರಾದವರು ಮಕ್ಕಳ ಮನಪರಿವರ್ತನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಸುರೇಶ ಕುಮಾರ ಪಾಠ ಮಾಡಿದರು.
ನಗರದ ಸರ್ಕಿಟ್ ಹೌಸ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಎಂಟು ಜಿಲ್ಲೆಗಳ ಬಿಇಓಗಳೊಂದಿಗೆ ಸಭೆ ಮಾಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ರ್ಯಾಂಕಿಂಗ್ನಲ್ಲಿ ನಾವು ಕೆಳಗಿನ ಸ್ಥಾನದಲ್ಲಿದ್ದೇವೆ. ಡಿಡಿಪಿಐಗಳು ಕಳೆದ ವರ್ಷ ಏನೆಲ್ಲ ಪ್ರಯತ್ನ ಮಾಡಿದರೂ ಬೆಳವಣಿಗೆ ಎಲ್ಲಿಗೆ ಬಂದಿದೆ ಎಂದು ಡಿಡಿಪಿಐ ಹಾಗೂ ಬಿಇಓಗಳಿಗೆ ಕ್ಲಾಸ್ ತೆಗೆದುಕೊಂಡರು.
ಮಕ್ಕಳಿಗೆ ತಿಳಿಯಬೇಕಾದದ್ದನ್ನು ನಾವು ತಿಳಿಸಬೇಕು. ಆ ಸಂದರ್ಭದಲ್ಲಿ ಯಾವ ಉದಾಹರಣೆ ಕೊಟ್ಟು ಮಕ್ಕಳಿಗೆ ಹೇಗೆ ಪಾಠ ಮಾಡುತ್ತೀರಿ? ಎಂದು ಅಧಿಕಾರಿಗಳಿಗೆ ಸ್ವತಃ ಸಚಿವರೇ ಪಾಠ ಮಾಡಿದರು.