ಹುಬ್ಬಳ್ಳಿ: ಜನರು ಪ್ರಯಾಣಿಸುವ ಬಸ್ ಅನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸರಕು ಸಾಗಿಸುವ ವಾಹನದಂತೆ ಬಳಸಿಕೊಂಡಿದೆ. ಇದು ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಜನರು ಓಡಾಡಲು ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸದ ಸಾರಿಗೆ ಇಲಾಖೆ, ನಗರದ ಹೊಸೂರು ಸರ್ಕಲ್ನಲ್ಲಿ ರಸ್ತೆ ವಿಭಜಕ ಕಾಮಗಾರಿಗೆ ಅಳವಡಿಸಿದ್ದ ಕಲ್ಲುಗಳನ್ನು ಸಾಗಿಸಲು ಸುಸಜ್ಜಿತವಾದ ಬಸ್ ಅನ್ನು ಬಳಸಿಕೊಳ್ಳಲಾಗಿದೆ.

ಕಲ್ಲುಗಳನ್ನು ಬಸ್ನಲ್ಲಿ ತುಂಬಿ ಡಿಪೋಗೆ ಸಾಗಿಸಲಾಗಿದೆ. ಇದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಕೂಲಿ ಆಳುಗಳಂತೆ ಬಳಸಿಕೊಂಡಿರುವುದು ವಿಪರ್ಯಾಸ.
ಸರಿಯಾದ ಆದಾಯವಿಲ್ಲದೆ ಸಂಸ್ಥೆಯು ಆರ್ಥಿಕ ನಷ್ಟದಲ್ಲಿದೆ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉತ್ತಮ ಬಸ್ಗಳನ್ನು ಸರಕು ಸಾಗಿಸುವ ವಾಹನಗಳಂತೆ ಬಳಸಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.