ಧಾರವಾಡ: ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾದ ಹಿನ್ನೆಲೆ ಧಾರವಾಡದಲ್ಲಿ ವಿನೂತನವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುತ್ತಿದೆ.
ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿದ್ದು, ಶಾಲಾ ಗೇಟಿನ ಮುಂಭಾಗದಲ್ಲಿ ಬಣ್ಣ ಬಣ್ಣದ ಬಲೂನ್‍ಗಳಿಂದ ಸಿಂಗಾರಗೊಳಿಸಲಾಗಿತ್ತು. ಜೊತೆಗೆ ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿ ಎಂದು ಚಾಕೋಲೆಟ್ ಸಹ ನೀಡಲಾಯಿತು.
ಇನ್ನು ಜಿಲ್ಲೆಯಲ್ಲಿ 161 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 29,464 ಮಕ್ಕಳು ಪರೀಕ್ಷೆಗೆ ಹಾಜರಾದರು. 119 ಸರ್ಕಾರಿ ಶಾಲೆಗಳು, 140 ಖಾಸಗಿ ಅನುದಾನಿತ ಹಾಗೂ 154 ಅನುದಾನರಹಿತ ಶಾಲೆಗಳು ಸೇರಿ ಒಟ್ಟು 413 ಶಾಲೆಗಳಿಂದ 15,912 ಬಾಲಕ ಹಾಗೂ 13,552 ಬಾಲಕಿಯರು ಸೇರಿ ಒಟ್ಟು 29,464 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಇನ್ನು ನಗರ ಪ್ರದೇಶಗಳಲ್ಲಿ 76 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 85 ಸೇರಿ ಒಟ್ಟು 161 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ, ಸಿದ್ಧತೆ ಮಾಡಿಕೊಳ್ಳಲಾಗಿತ್ತು.