ಹುಬ್ಬಳ್ಳಿ: ಉರಗ ಸಂರಕ್ಷಕನಿಗೆ ಹಾವು ಕಡಿದಿದ್ದು, ಕಚ್ಚಿದ ಹಾವಿನ ಜೊತೆ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದ ಕಾರಣ ಸಿಬ್ಬಂದಿ ಕ್ಷಣಕಾಲ ಬೆಚ್ಚಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ವಿಶ್ವನಾಥ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಕಚ್ಚಿದ ಹಾವನ್ನು ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಹಾವು ನೋಡಿದ ಸಿಬ್ಬಂದಿ ಆತಂಕಗೊಂಡು ಚಿಕಿತ್ಸೆ ನೀಡಲು ಭಯಗೊಂಡಿದ್ದು, ಬಳಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಹಾವುಗಳಿಂದ ಜನರನ್ನು ಭಯ ಮುಕ್ತ ಮಾಡುತ್ತಿದ್ದ ಸ್ನೇಕ್ ವಿಶ್ವನಾಥ ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.