ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬಣ್ಣದ ಹಬ್ಬ ರಂಗಪಂಚಮಿಗೆ ಕ್ಷಣಗಣನೆ ಆರಂಭವಾಗಿದೆ. ಸಾಂಪ್ರದಾಯಿಕತೆಯ ಜೊತೆಗೆ ಮತ್ತೆ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತಿದೆ.
ಕೋವಿಡ್ ಕರಿನೆರಳಿನಿಂದ ಕಳೆಗುಂದಿದ ಹಬ್ಬಕ್ಕೆ ಈ ವರ್ಷ ಮೆರುಗು ಸಿಕ್ಕಿದೆ. ಈಗಾಗಲೇ ಸಾರ್ವಜನಿಕರು ಬಣ್ಣ ಹಾಗೂ ಹಲಗೆ ಖರೀದಿಯಲ್ಲಿ ನಿರತರಾಗಿದ್ದಾರೆ. ಇದೇ ವೇಳೆ, ಶಾಂತಿಯುತ ರೀತಿಯಲ್ಲಿ ಆಚರಣೆ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಮೇದಾರ ಓಣಿಯಲ್ಲಿ ರಂಗಪಂಚಮಿ: ಮೇದಾರ ಓಣಿಯಲ್ಲಿ ಮೇದಾರ ಸಮುದಾಯದಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಲಾಗಿದೆ.
ಸುಮಾರು ಒಂದು ತಿಂಗಳಿನಿಂದಲೇ ಹೋಳಿ ಕಾಮಣ್ಣನ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಹುಣ್ಣಿಮೆಯಂದು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಣ್ಣಿಮೆಯ ಐದು ದಿನದ ನಂತರ ಪಂಚಮಿಯಂದು ಕಾಮಣ್ಣನ ದಹನ ಮಾಡುವ ಮೂಲಕ ರಂಗಪಂಚಮಿಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಭವಾನಿ ದೇವಸ್ಥಾನದ ಗರ್ಭಗುಡಿಯಲ್ಲಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ.. ವಿಡಿಯೋ