ETV Bharat / city

ಆರ್‌ಟಿ-ಪಿಸಿಆರ್‌ ರಿಪೋರ್ಟ್‌ ಇಲ್ಲದೇ ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದವರಿಗೆ ಕ್ವಾರಂಟೈನ್ - Quarantine for passengers who have no R TPCR report

ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿ (RT-PCR Negative Report) ಇಲ್ಲದೇ ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ನಾಲ್ವರು ಪ್ರಯಾಣಿಕರನ್ನು ಹುಬ್ಬಳ್ಳಿಯ ಅಂಜುಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

Hubli
ಹುಬ್ಬಳ್ಳಿ
author img

By

Published : Aug 5, 2021, 9:20 AM IST

ಹುಬ್ಬಳ್ಳಿ: ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿ ಇಲ್ಲದೇ ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಆಗಮಿಸಿದ್ದ 8 ಪ್ರಯಾಣಿಕರ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ನಾಲ್ವರನ್ನು ಹುಬ್ಬಳ್ಳಿಯ ಅಂಜುಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ರಾಜ್ಯ ಸರ್ಕಾರ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿ ಕಡ್ಡಾಯಗೊಳಿಸಿ ಆದೇಶಿಸಿದೆ. ಹೀಗಾಗಿ, ಹು-ಧಾ ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ನೇತೃತ್ವದಲ್ಲಿ ಮಹಾರಾಷ್ಟ್ರದಿಂದ ರಾಜ್ಯ ಸಾರಿಗೆ ಹಾಗೂ ಖಾಸಗಿ ಬಸ್‌‌ಗಳ ಮೂಲಕ ಆಗಮಿಸಿದ ಪ್ರಯಾಣಿಕರ ವಿವರ ಪರಿಶೀಲಿಸಲಾಯಿತು.

ಈ ವೇಳೆ ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿ ಇಲ್ಲದಿರುವ 8 ಪ್ರಯಾಣಿಕರು ಪತ್ತೆಯಾಗಿದ್ದಾರೆ. ಇವರಲ್ಲಿ ನಾಲ್ವರು ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದ ಕಾರಣ ಅವರ ಸ್ವ್ಯಾಬ್ ಹಾಗೂ ಸಂಪರ್ಕ ಸಂಖ್ಯೆ ಸಂಗ್ರಹಿಸಿ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ 4 ಮಂದಿಯನ್ನು ಹುಬ್ಬಳ್ಳಿಯ ಅಂಜುಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರ ಆರ್​ಟಿ-ಪಿಸಿಆರ್​ ತಪಾಸಣೆಗಾಗಿ ಸ್ವ್ಯಾಬ್ ಸಂಗ್ರಹಣೆ ಮಾಡಲಾಗಿದೆ.

ಇದನ್ನೂ ಓದಿ: ಬೊಮ್ಮಾಯಿ ಅಧಿಕಾರವಧಿ ಬಗ್ಗೆ ಭವಿಷ್ಯ ನುಡಿದ ಮೈಲಾರ ಧರ್ಮದರ್ಶಿಗೆ ಸಂಕಷ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.