ETV Bharat / city

ಕೊರೊನಾ ಖಿನ್ನತೆ.. ರಾಜ್ಯದಲ್ಲೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಆರಂಭವಾಗಲಿದೆ ಸೈಕೊಥೆರಪಿ - ಧಾರವಾಡ ಸುದ್ದಿ

ಕಿಮ್ಸ್‌ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದು, ಅದೇ ರೀತಿ ರಾಜ್ಯದಲ್ಲಿಯೇ ವಿನೂತನ ಪ್ರಯೋಗವೊಂದನ್ನು ಕೈಗೊಂಡಿದೆ. ಕೊರೊನಾ ಹರಡುವಿಕೆ ತಡೆಗೆ ಸರ್ಕಾರ ವಿವಿಧ ರೀತಿ ಹೋರಾಡುತ್ತಿದೆ..

Psychotherapy is set to begin in Dharwad for the first time in the state
ಕೊರೊನಾ ಖಿನ್ನತೆ: ರಾಜ್ಯದಲ್ಲೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಆರಂಭವಾಗಲಿದೆ ಸೈಕೋಥೆರಪಿ
author img

By

Published : Aug 1, 2020, 7:17 PM IST

ಹುಬ್ಬಳ್ಳಿ : ಕೊರೊನಾ ಬಗೆಗಿನ ಜನರಲ್ಲಿನ ಭಯವನ್ನು ಹೋಗಲಾಡಿಸಲು ಧಾರವಾಡದ ಡಿಮ್ಹಾನ್ಸ್ ಹೊಸ ಸೈಕೊಥೆರಪಿ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಆರಂಭವಾಗಲಿದೆ ಸೈಕೊಥೆರಪಿ

ಕಿಮ್ಸ್‌ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದು, ಅದೇ ರೀತಿ ರಾಜ್ಯದಲ್ಲಿಯೇ ವಿನೂತನ ಪ್ರಯೋಗವೊಂದನ್ನು ಕೈಗೊಂಡಿದೆ. ಕೊರೊನಾ ಹರಡುವಿಕೆ ತಡೆಗೆ ಸರ್ಕಾರ ವಿವಿಧ ರೀತಿ ಹೋರಾಡುತ್ತಿದೆ. ಇನ್ನು, ನಮಗೆ ಕೊರೊನಾ ಬಂದರೆ ಹೇಗೆ, ನಮ್ಮ ಮನೆ ಜವಾಬ್ದಾರಿ ಯಾರ ಮೇಲೆ, ಕೊರೊನಾ ಬಂದ್ರೆ ನಾನು ಬದುಕುತ್ತೇನಾ ಎಂದು ಜಿಲ್ಲಾಡಳಿತಕ್ಕೆ ನಿತ್ಯ ನೂರಾರು ದೂರವಾಣಿ ಕರೆಗಳು ಬರುತ್ತಿವೆ.

ಈ ಹಿನ್ನೆಲೆ, ಧಾರವಾಡದ ಡಿಮ್ಹಾನ್ಸ್ ಹೊಸ ಸೈಕೊಥೆರಪಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಕೊರೊನಾ ಬಗೆಗಿನ ಜನರಲ್ಲಿನ ಭಯವನ್ನ ತಡೆಗಟ್ಟಲು ಈ ಹೊಸ ತಂತ್ರಕ್ಕೆ ಅಳವಡಿಸಲು ನಿರ್ಧರಿಸಲಾಗಿದೆ. ಜನರು ಕೊರೊನಾ ಬರುವ ಮುನ್ನವೇ ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ಹಿನ್ನೆಲೆ, ಅಂತಹವರನ್ನು ಗುರುತಿಸಿ ಮನೋಸ್ಥೈರ್ಯ ತುಂಬುವ ಕಾರ್ಯ ಮಾಡಲಿದೆ. 10 ಜನರ ವೈದ್ಯರ ತಂಡ ಇದಕ್ಕಾಗಿ ರೆಡಿಯಾಗಿದ್ದು, ಜಿಲ್ಲಾಡಳಿತಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ಬಂದಿದೆ ಎಂದು ಡಿಮ್ಹಾನ್ಸ್ ನಿರ್ದೇಶಕ ಮಹೇಶ್ ದೇಸಾಯಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.