ETV Bharat / city

BSY ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಸಿಎಂ, ಇನ್ನೊಬ್ಬ ಬಂದರೂ ಭ್ರಷ್ಟ ಆಗಿರ್ತಾರೆ: ಸಿದ್ದರಾಮಯ್ಯ - ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯಾಗ್ತಾರೆ

ಯಡಿಯೂರಪ್ಪ ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಮುಖ್ಯಮಂತ್ರಿಯಾಗಿದ್ದರು. ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿ ಆಗಿರ್ತಾರೆ. ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷ, ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿಯಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

Opposition leader Siddaramaiah
ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯಾಗ್ತಾರೆ: ಸಿದ್ದರಾಮಯ್ಯ
author img

By

Published : Jul 26, 2021, 12:51 PM IST

Updated : Jul 26, 2021, 5:17 PM IST

ಗದಗ: ಯಡಿಯೂರಪ್ಪ ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರೋದರಿಂದ ರಾಜ್ಯಕ್ಕೆ ಒಳ್ಳೆದಾಗೋದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ರಾಜೀನಾಮೆ ನೀಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರು ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರೋದರಿಂದ ರಾಜ್ಯಕ್ಕೆ ಒಳ್ಳೆದಾಗೋದಿಲ್ಲ. ಯಡಿಯೂರಪ್ಪ ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಮುಖ್ಯಮಂತ್ರಿಯಾಗಿದ್ದರು. ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿ ಆಗಿರ್ತಾರೆ. ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷ, ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿಯಿಲ್ಲ ಎಂದು ಟೀಕಿಸಿದರು.

ಬಿಎಸ್​ವೈ ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಸಿಎಂ, ಇನ್ನೊಬ್ಬ ಬಂದರೂ ಭ್ರಷ್ಟ ಆಗಿರ್ತಾರೆ: ಸಿದ್ದರಾಮಯ್ಯ

ಮುಂದಿನ ಸಿಎಂ ಯಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇನು ಬಿಜೆಪಿ ಅಧ್ಯಕ್ಷನೆ? ಅದು ಅವರ ಪಕ್ಷಕ್ಕೆ ಸೀಮಿತ ಎಂದು ಉತ್ತರಿಸಿದರು. ಇನ್ಮುಂದೆ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು. ಧರ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ ಇರಬೇಕು. ಇನ್ಮುಂದೆ ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುವುದೇ ನಮ್ಮ ಹೋರಾಟ. ಕಾಂಗ್ರೆಸ್ ಒಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸ್ತಾರೆ ಎಂದು ಗುಡುಗಿದರು.

ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಆಗ್ತಾರೆ

ಹುಬ್ಬಳ್ಳಿ: ಬಿಜೆಪಿ ಭ್ರಷ್ಟ ಪಕ್ಷ, ಭ್ರಷ್ಟರನ್ನ ರಕ್ಷಿಸುವ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಹೋದ್ರೆ, ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯಾಗ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನೆರೆಯಿಂದ ಇದುವರೆಗೂ 9 ಜನರ ಜೀವ ಹಾನಿಯಾಗಿದೆ. ಸಾವಿರಾರು ಮನೆಗಳು ಕುಸಿದು ಬಿದ್ದಿವೆ ಹಾಗೂ ಬೆಳೆ ಹಾನಿಯಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ‌ ನೆರವಿಗೆ ಧಾವಿಸಬೇಕು. ಕಳೆದ ಬಾರಿಯ ನೆರೆ ಪರಿಹಾರ ಇನ್ನೂ ಕೊಟ್ಟಿಲ್ಲ.‌ ಕನಿಷ್ಠ ಈ ಬಾರಿಯಾದರೂ ಪರಿಹಾರ ನೀಡಲಿ ಎಂದರು.

ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯಾಗ್ತಾರೆ: ಸಿದ್ದರಾಮಯ್ಯ

ಬಿಜೆಪಿ ಭ್ರಷ್ಟ ಪಕ್ಷ, ಭ್ರಷ್ಟರನ್ನ ರಕ್ಷಿಸುವ ಕೆಲಸವನ್ನು ಬಿಜೆಪಿ‌ ಮಾಡುತ್ತಿದೆ. ಯಡಿಯೂರಪ್ಪ ಹೋದ್ರೆ, ರಾಜ್ಯದಲ್ಲಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯಾಗ್ತಾರೆ. ಸಿಎಂ ಬದಲಾವಣೆಯಿಂದ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಜೆಪಿಯೇ ರಾಜ್ಯ ಬಿಟ್ಟು‌ ತೊಲಗಬೇಕು. ಬಿಜೆಪಿಯಿಂದ ರಾಜ್ಯದ ಹಿತ ಕಾಪಾಡಲು ಸಾಧ್ಯವಿಲ್ಲ ಎಂದರು.

Last Updated : Jul 26, 2021, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.