ಧಾರವಾಡ: ಆಕೆ ಆಟಿಕೆ ವಸ್ತುಗಳೊಂದಿಗೆ ಆಟವಾಡುವ ಸಣ್ಣ ಮಗು. ಆದರೆ ಪುಟ್ಟ ಕಂದಮ್ಮನ ನೆನಪಿನ ಶಕ್ತಿ ಮಾತ್ರ ಆಗಾಧವಾಗಿದೆ. ಈ ಪುಟ್ಟ ಬಾಲಕಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅರಸಿ ಬಂದಿದೆ.
ಧಾರವಾಡದ ಮಾಳಮಡ್ಡಿಯ ರಮ್ಯಶ್ರೀ ಹಾಗೂ ವೈಭವ ರಾಜಪುರೋಹಿತ ಅವರ ಪುತ್ರಿ ರೇವಾ ಒಂದು ವರ್ಷ ಎರಡು ತಿಂಗಳು ಇರುವಾಗಲೇ 30 ಬಗೆಯ ಹಣ್ಣು, 5 ತರಹದ ಕಾಯಿಪಲ್ಯ, 15 ಪ್ರಾಣಿಗಳು ಮತ್ತು 10 ಪ್ರಕಾರದ ವಸ್ತುಗಳು ಹಾಗೂ 30 ಬಗೆಯ ಆಟಿಕೆಗಳನ್ನು ಗುರುತಿಸುತ್ತಾಳೆ. ಈಕೆಯ ನೆನಪಿನ ಶಕ್ತಿ ಗುರುತಿಸಿ ಅದ್ಭುತ ಜ್ಞಾನ ಎಂದು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಲಾಗಿದೆ.
ಕೇವಲ ಒಂದು ವರ್ಷದವಳಿದ್ದಾಗ ರೇವಾ ದೇವರ ಭಾವಚಿತ್ರಗಳನ್ನು ಗುರುತಿಸುತ್ತಿದ್ದಳು. ಪ್ರಾಣಿಗಳ ಅನುಕರಣೆ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾಳೆ. ಅದರ ಫಲವಾಗಿ ಇಂದು ದೇಶದ ಅತ್ಯುನ್ನತ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಸದ್ಯ ಒಂದು ವರ್ಷ ನಾಲ್ಕು ತಿಂಗಳ ಬಾಲಕಿ ಸಾಧನೆ ಧಾರವಾಡ ಜಿಲ್ಲೆಗೂ ಹೆಮ್ಮೆ ಎನಿಸಿದೆ.
ಇದನ್ನೂ ಓದಿ: ಹುಲಿಯನ್ನೇ ಕಾಳಗಕ್ಕೆ ಕರೆದ ಕರಡಿ.. ರೋಮಾಂಚಕ ವಿಡಿಯೋ ವೈರಲ್..