ETV Bharat / city

Omicron​ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖ : ಧಾರವಾಡ ಡಿಸಿ ಸ್ಪಷ್ಟನೆ - Dharwad DC statement

ನಿನ್ನೆ (ಭಾನುವಾರ) ಅವರ ವರದಿ ನೆಗೆಟಿವ್ ಬಂದಿತ್ತು. ಇಂದು ಮತ್ತೆ ಪರೀಕ್ಷಿಸಲಾಗಿದ್ದು, ವರದಿ ನೆಗೆಟಿವ್​​ ಬಂದಿದೆ. ಹೀಗಾಗಿ, ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ ಎಂದರು..

Dharwad DC Nitesh Patil
ಜಿಲ್ಲಾಧಿಕಾರಿ ನಿತೇಶ ಪಾಟೀಲ
author img

By

Published : Dec 20, 2021, 3:06 PM IST

ಧಾರವಾಡ : ಜಿಲ್ಲೆಯಲ್ಲಿ ಒಮಿಕ್ರಾನ್​ ಸೋಂಕಿತ ಮಹಿಳೆ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.4ರಂದು ಮಹಿಳೆಯೊಬ್ಬರಿಗೆ (54) ಜ್ವರದ ಲಕ್ಷಣ ಇತ್ತು. ಹೀಗಾಗಿ, ಡಿ.5ರಂದು ಕೋವಿಡ್ ಟೆಸ್ಟ್ ಮಾಡಿಸಿದ್ದಾಗ, ಒಮಿಕ್ರಾನ್​ ಸೋಂಕು ದೃಢಪಟ್ಟಿತ್ತು. ಸದ್ಯ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ನಿನ್ನೆ (ಭಾನುವಾರ) ಅವರ ವರದಿ ನೆಗೆಟಿವ್ ಬಂದಿತ್ತು. ಇಂದು ಮತ್ತೆ ಪರೀಕ್ಷಿಸಲಾಗಿದ್ದು, ವರದಿ ನೆಗೆಟಿವ್​​ ಬಂದಿದೆ. ಹೀಗಾಗಿ, ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ ಎಂದರು.

ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿ 137 ಜನರಿದ್ದರು. ಅವರೆಲ್ಲರನ್ನೂ ತಪಾಸಣೆ ಮಾಡಿದ್ದೇವೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮತ್ತೆ ಜನರನ್ನು ತಪಾಸಣೆ ಮಾಡುತ್ತೇವೆ. ಮನೆ ಇರುವ ಏರಿಯಾ ಮತ್ತು ಚಿಕಿತ್ಸೆ ನೀಡಿದ ಆಸ್ಪತ್ರೆಯವರನ್ನು ಕೂಡ ಟೆಸ್ಟ್ ಮಾಡುತ್ತೇವೆ ಎಂದು ಅವರು ಹೇಳಿದರು.

ಉಳಿದವರ ವರದಿ ಪಾಸಿಟಿವ್ ಬಂದಲ್ಲಿ ಜಿನೋಮ್ ಸೀಕ್ವೆನ್ಸ್​ಗೆ ಕಳುಹಿಸುತ್ತೇವೆ. ಸೋಂಕಿತ ಮಹಿಳೆಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಅವರ ಜೊತೆಗಿದ್ದ ಮೂವರಿಗೂ ಟೆಸ್ಟ್ ಮಾಡಲಾಗಿತ್ತು. ಅವರ ವರದಿ ಸಹ ನೆಗೆಟಿವ್ ಬಂದಿದೆ. ಅವರ ಕಚೇರಿಗೆ ಸದ್ಯ ರಜೆ ಇದೆ.

ಸದ್ಯ ಅಲ್ಲಿ ಯಾರೂ ಕೆಲಸ‌ ಮಾಡುತ್ತಿಲ್ಲ. ಸೋಂಕಿತ ಮಹಿಳೆ ಆರೋಗ್ಯವಾಗಿದ್ದಾರೆ.‌ ಆದರೂ ಇನ್ನೊಂದು ವಾರ ಹೋಂ ಐಸೋಲೇಷನ್​​​ನಲ್ಲಿರುತ್ತಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Omicron : ಮಲೆನಾಡಿಗೂ ಕಾಲಿಟ್ಟ ಒಮಿಕ್ರಾನ್.. 20 ವರ್ಷದ ಯುವತಿಯಲ್ಲಿ ಸೋಂಕು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.