ಧಾರವಾಡ: ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯತ್ನ ಮೊದಲನೇ ವಾರ್ಡ್ನಲ್ಲಿ ಒಂದು ಸ್ಥಾನಕ್ಕೆ ಜರುಗಿದ ಉಪಚುನಾವಣೆಯಲ್ಲಿ ಸಂತೋಷ ನಾಗಪ್ಪ ದಾಸನಕೊಪ್ಪ ಜಯಗಳಿಸಿದ್ದಾರೆ.
437 ಮತಗಳನ್ನು ಪಡೆದುಕೊಂಡ ಸಂತೋಷ ದಾಸನಕೊಪ್ಪ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಜಯಗಳಿಸಿದರು. ಇವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಡಾ.ಸಂತೋಷ ಬಿರಾದಾರ, ಚುನಾವಣಾಧಿಕಾರಿ ವಿ.ಪಿ.ಜಾಕೋಜಿ, ಸಹಾಯಕ ಚುನಾವಣಾಧಿಕಾರಿ ಅರ್ಜುನ ಲಮಾಣಿ ಹಾಗೂ ಇತರರು ಇದ್ದರು.
ಸಂತೋಷ ದಾಸನಕೊಪ್ಪ ಅವರ ತಂದೆ ನಾಗಪ್ಪ ದಾಸನಕೊಪ್ಪ ಅವರು ಕೊರೊನಾ ಎರಡನೇ ಅಲೆಯಲ್ಲಿ ಕೋವಿಡ್ನಿಂದ ನಿಧನ ಹೊಂದಿದ್ದರು. ಅವರು ಸಹ ಗ್ರಾ.ಪಂ ಅಧ್ಯಕ್ಷರಾಗಿದ್ದರು.