ETV Bharat / city

ಬಿಆರ್‌ಟಿಎಸ್​​ಗೆ ರಾಷ್ಟ್ರೀಯ ಪ್ರಶಸ್ತಿ: ಜಗದೀಶ್​​ ಶೆಟ್ಟರ್ ಹರ್ಷ - Former CM Jagadish Shettar

'ಉತ್ತಮ ಚತುರ ನಗರ ಸಾರಿಗೆ' ಪ್ರಶಸ್ತಿಗೆ ಭಾಜನವಾಗಿರುವದಕ್ಕೆ ಹೆಚ್‌ಡಿಬಿಆರ್‌ಟಿಎಸ್‌ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಜಗದೀಶ್​​ ಶೆಟ್ಟರ್ ಶುಭ ಹಾರೈಸಿದ್ದಾರೆ.

Jagadish Shettar
ಜಗದೀಶ್​​ ಶೆಟ್ಟರ್
author img

By

Published : Oct 24, 2021, 5:08 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ತ್ವರಿತ ಸಾರಿಗೆ ಸೇವೆ(ಹೆಚ್‌ಡಿಬಿಆರ್‌ಟಿಎಸ್) ಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯಡಿ 'ಉತ್ತಮ ಚತುರ ನಗರ ಸಾರಿಗೆ' (City with best intelligent transport system)ಪ್ರಶಸ್ತಿಗೆ ಭಾಜನವಾಗಿರುವದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್​​ ಶೆಟ್ಟರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರೋತ್ಸಾಹಿಸುವ ಮಹತ್ವಾಕಾಂಕ್ಷೆಯೊಂದಿಗೆ ಅನುಷ್ಠಾನಗೊಳಿಸಿದ "ಚಿಗರಿ" ಬಸ್‌ಗಳು ಅವಳಿನಗರಗಳ ನಡುವೆ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೆಚ್ಚಿನ ಮೊದಲ ಆಯ್ಕೆಯಾಗಿದೆ. ಪರಿಸರ ಮಾಲಿನ್ಯ ತಡೆಯಲು ಪ್ರತಿಯೊಬ್ಬರೂ ಕೊಡುಗೆ ನೀಡುವುದು ಅಗತ್ಯವಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಹೆಚ್ಚು ಬಳಕೆ ಮಾಡಿ, ಖಾಸಗಿ ದ್ವಿಚಕ್ರ ವಾಹನ, ಕಾರುಗಳ ಓಡಾಟ ಕಡಿಮೆಗೊಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.

National Award for HDBRTS
ಹೆಚ್‌ಡಿಬಿಆರ್‌ಟಿಎಸ್​​ಗೆ ರಾಷ್ಟ್ರೀಯ ಪ್ರಶಸ್ತಿ

ಜತೆಗೆ ಪ್ರಶಸ್ತಿ ಪಡೆದಿರುವ ಹೆಚ್‌ಡಿಬಿಆರ್‌ಟಿಎಸ್‌ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಶೆಟ್ಟರ್ ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.