ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ತೀರ್ಮಾನ. ಭಾರತದಲ್ಲಿ ಹಿಂದೂ-ಮುಸ್ಲೀಮರು ಅಣ್ಣ ತಮ್ಮಂದಿರಂತೆ ಜೀವಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕೋಮುವಾದ ಸೃಷ್ಟಿಸಿ ದೇಶ ಹಾಳು ಮಾಡುತ್ತಿದೆ ಎಂದು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ವಿವಿಧ ಮುಸ್ಲಿಂ ಸಂಘಟನೆಗಳ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹೌದು ಹುಲಿಯಾ, ಎನ್‌ಆರ್‌ಸಿ, ಸಿಎಎ ಬೇಡ ನಾಮಫಲಕ ಗಮನ ಸೆಳೆಯಿತು.
ಹಿಂದೂ ಮುಸ್ಲಿಂ ಬಾಯಿ ಬಾಯಿ, ವಂದೇ ಮಾತರಂ, ಹಮ್ ಸಬ್ ಏಕ್ ಹೈ, ಮೋದಿ ಹಠಾವೋ ದೇಶ ಬಚಾವೋ ಎಂದು ಘೋಷಣೆ ಕೂಗಿದರು. ಪೌರತ್ವ ತಿದ್ದುಪಡಿ ಕಾಯಿದೆ ಹಿಂಪಡೆದು ದೇಶದ ಏಕತೆ ಕಾಪಾಡಬೇಕು ಎಂದು ಒತ್ತಾಯಿಸಿದರು.