ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಸಾಧನೆ ಸಿದ್ದಾಂತಗಳ ಬಗ್ಗೆ ಹೇಳಬೇಕು. ಬದಲಾಗಿ ವೈಯಕ್ತಿಕ ನಿಂದನೆ ಮಾಡಬಾರದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನನಗೆ ಹಾನಗಲ್ ಉಸ್ತುವಾರಿ ನೀಡಿದ್ದಾರೆ. ಆದರೆ ನಾನು ಊರಲ್ಲಿ ಇರಲಿಲ್ಲ. ಹೀಗಾಗಿ ತಡವಾಗಿ ಬಂದಿದ್ದೇನೆ. ಮಾಜಿ ಸಿಎಂ ಬಿಎಸ್ವೈ ಜತೆ ಪ್ರಚಾರ ಕೈಗೊಳ್ಳುತ್ತೇವೆ. ವಾತಾವರಣ ಚೆನ್ನಾಗಿ ಇದೆ. ಹಾನಗಲ್ನಲ್ಲಿ ನಾವು ನೂರಕ್ಕೆ ನೂರರಷ್ಟು ಮುನ್ನೆಡೆಯಲ್ಲಿದ್ದೇವೆ . ಗುಪ್ತಚರ ವರದಿ ಸಹ ಹಲವು ಭಾರಿ ಸುಳ್ಳಾಗಿದೆ. ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.