ಧಾರವಾಡ: ತಾಯಿಯ ಸ್ತನಪಾನ ಮಕ್ಕಳ ಪಾಲಿಗೆ ಅಮೃತ. ಎದೆ ಹಾಲಿನ ಕೊರತೆ ನೀಗಿಸಲು ಧಾರವಾಡದಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದೆ.
ರೋಟರಿ ಇಂಟರ್ ನ್ಯಾಷನಲ್ ಗ್ಲೋಬಲ್ ಗ್ರಾಂಟ್ ಅಡಿಯಲ್ಲಿ ಧಾರವಾಡ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಘಟಕದವರು ಎಸ್‌ಡಿಎಂ ಆಸ್ಪತ್ರೆಯಲ್ಲಿ ಈ ಮಿಲ್ಕ್ ಬ್ಯಾಂಕ್ ಆರಂಭಿಸಿದ್ದಾರೆ. ಬೆಂಗಳೂರು, ಬೆಳಗಾವಿ ಬಳಿಕ ಇದೀಗ ರಾಜ್ಯ ಮೂರನೇ ಮಿಲ್ಕ್ ಬ್ಯಾಂಕ್ ಧಾರವಾಡದಲ್ಲಿ ಉದ್ಘಾಟನೆಯಾಗಿದೆ.

ಸಾಮಾನ್ಯವಾಗಿ ಹೆರಿಗೆಯಾದಾಗ ತಾಯಿ ಮರಣ ಹೊಂದಿದರೆ ಅದೆಷ್ಟೋ ಶಿಶುಗಳು ಎದೆ ಹಾಲು ಕೊರತೆ ಎದುರಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೆ ಬಾಟಲಿ ಹಾಲು ಮಕ್ಕಳಿಗೆ ಕೊಟ್ಟರೂ ತಾಯಿ ಹಾಲಿನಷ್ಟು ಪೌಷ್ಟಿಕಾಂಶ ಹೊಂದಿರುವುದಿಲ್ಲ. ತಾಯಿಯ ಹಾಲು ದಾನ ಮಾಡುವುದರಿಂದ ಹಿಡಿದು, ಅದನ್ನು ಶೇಖರಿಸಿಡುವವರೆಗೂ ಎಲ್ಲವನ್ನೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಮಾಡುತ್ತಿದ್ದು, ಇದಕ್ಕಾಗಿ ಸುಮಾರು 60 ಲಕ್ಷ ರೂಪಾಯಿ ಖರ್ಚು ಮಾಡಿ ಯುನಿಟ್ ಮಾಡಿದ್ದಾರೆ. ಒಮ್ಮೆ ಸಂಗ್ರಹಿಸಿಟ್ಟ ಹಾಲನ್ನು ಮೂರರಿಂದ ಆರು ತಿಂಗಳವರೆಗೂ ಸ್ಟೋರ್ ಮಾಡಿಟ್ಟುಕೊಳ್ಳುವ ಸೌಲಭ್ಯವಿದ್ದು, ಎಲ್ಲರಿಗೂ ಉಚಿತವಾಗಿಯೇ ದೊರೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಒಂದು ಕೌಂಟರ್ ತೆರೆಯುವ ಚಿಂತನೆ ನಡೆಯುತ್ತಿದೆ.
ಇದನ್ನೂ ಓದಿ : ಬೇಸಿಗೆ ಋತುವಿನಲ್ಲಿ ಶಿಶುಗಳ ಪಾಲನೆಗೆ ಅಗತ್ಯ ಸಲಹೆಗಳು..