ಹುಬ್ಬಳ್ಳಿ: ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಬಹಿರಂಗ ಪಡಿಸಲ್ಲ. ಗೋವಾ ನಮ್ಮ ಯೋಜನೆಗಳಿಗೆ ಅಡ್ಡಿಪಡಿಸುವ ಹಿನ್ನೆಲೆ ಮಾತುಕತೆ ಬಹಿರಂಗ ಪಡಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಪ್ರಧಾನಮಂತ್ರಿ ಭೇಟಿ ಮಾಡಿ ಅವರ ಮೇಲೆ ಒತ್ತಡ ಹೇರಲು ಸಿದ್ಧತೆ ನಡೆದಿದೆ. ಮಹದಾಯಿ ಉಗಮ ಸ್ಥಾನಕ್ಕೆ ಗೋವಾದವರಿಗೆ ಬರಲು ಅನುಮತಿ ಯಾಕೆ ನೀಡಿದ್ರು?, ನಮ್ಮ ಅಧಿಕಾರಿಗಳು ಗೋವಾದ ಜನಪ್ರತಿನಿಧಿಗಳಿಗೆ ಯಾಕೆ ಅನುಮತಿ ನೀಡಿದ್ರು?, ನಮ್ಮ ಅಧಿಕಾರಿಗಳು ಮಲಗಿದ್ದಾರೆಯೇ?, ಪದೇ ಪದೆ ಬರಲು ಯಾಕೆ ಅನುಮತಿ ಕೊಡುತ್ತಿದ್ದಾರೆ ಎಂದರು.
ಇನ್ನು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ. ಪ್ರಧಾನಮಂತ್ರಿ ಭೇಟಿ ಮಾಡಿ, ಮನವರಿಕೆ ಮಾಡಲು ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ರೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದರು.