ETV Bharat / city

ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಮುಂದಾದ ಮಹಾನಗರ ಪಾಲಿಕೆ - ಬಯಲು ಮೂತ್ರ ವಿಸರ್ಜನೆ

ಇದರಲ್ಲಿ ಏಕಕಾಲಕ್ಕೆ ನಾಲ್ಕು ಜನರು ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುವಂತೆ ಇರುವ ಚತುರ್ಮುಖ ಮೂತ್ರಿ ಇದಾಗಿದ್ದು, ಕೆಳಗಡೆ ಸಿಮೆಂಟ್ ಫೌಂಡೇಷನ್ ಹಾಕುವುದನ್ನು ಬಿಟ್ಟರೆ ಬೇರೆ ಯಾವುದೇ ಗಟ್ಟಿ ನಿರ್ಮಾಣದ ಅವಶ್ಯಕತೆ ಇಲ್ಲ.

toilet
toilet
author img

By

Published : Apr 6, 2021, 7:32 PM IST

ಹುಬ್ಬಳ್ಳಿ: ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅವಳಿ ನಗರದ ವಿವಿಧ ಸ್ಥಳಗಳಲ್ಲಿ ಹೆಚ್‌ಡಿಪಿಇ ( ಹೈ ಡೆನ್ಸಿಟಿ ಪಾಲಿ ಎಥಿಲಿನ್ ) ವಸ್ತುವಿನಿಂದ ತಯಾರಿಸಿದ ಮೂತ್ರಿ (ಯೂರಿನಲ್ಸ್) ಅಳವಡಿಸಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.

ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ

ಪ್ರಾಯೋಗಿಕವಾಗಿ ಮೊದಲ ಹೆಚ್‌ಡಿಪಿಇ ಮೂತ್ರಿ ಅಳವಡಿಸಲು ನೀಲಿಜಿನ್ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಹೆಚ್‌ಡಿಪಿಇ ಮೂತ್ರಿಯನ್ನು ಪಾಲಿಕೆ ಆವರಣಕ್ಕೆ ತಂದಿದ್ದು, ಈಗ ನೀಲಿಜನ್ ರಸ್ತೆಯಲ್ಲಿ ಅಳವಡಿಕೆ ಕಾರ್ಯ ಪ್ರಾರಂಭಗೊಂಡಿದೆ.

measures-taken-to-prevent-open-plain-urination
ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ

ಇದನ್ನು ಅಳವಡಿಸುವ ಸ್ಥಳದಲ್ಲಿ ಸಿಮೆಂಟ್ ಫೌಂಡೇಷನ್ ಹಾಕಲು ಸಿದ್ಧತೆ ನಡೆಸಲಾಗಿದ್ದು, ಎರಡು ಮೂರು ದಿನಗಳಲ್ಲಿ ಹೊಸ ವಿನ್ಯಾಸದ ಮೂತ್ರಿಗೆ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲು ಪಾಲಿಕೆ ಅಣಿಯಾಗಿದೆ. ಆಂಧ್ರ ಪ್ರದೇಶದ ವಿಜಯವಾಡ ನಗರದಲ್ಲಿ ಈ ಮಾದರಿಯ ಮೂತ್ರಿ ಬಳಕೆಯಲ್ಲಿದೆ.

ಇದರಲ್ಲಿ ಏಕಕಾಲಕ್ಕೆ ನಾಲ್ಕು ಜನರು ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುವಂತೆ ಇರುವ ಚತುರ್ಮುಖ ಮೂತ್ರಿ ಇದಾಗಿದ್ದು, ಕೆಳಗಡೆ ಸಿಮೆಂಟ್ ಫೌಂಡೇಷನ್ ಹಾಕುವುದನ್ನು ಬಿಟ್ಟರೆ ಬೇರೆ ಯಾವುದೇ ಗಟ್ಟಿ ನಿರ್ಮಾಣದ ಅವಶ್ಯಕತೆ ಇಲ್ಲ. ಒಂದು ಸಂಪೂರ್ಣ ಸೆಟ್​ಅಪ್​​​ ತಂದು ಅಳವಡಿಸುವುದು, ಅಷ್ಟೇ ಸುಲಭವಾಗಿ ಬೇರೆಡೆ ಸ್ಥಳಾಂತರಿಸಲೂ ಸಾಧ್ಯ. ಇದು 250 ಲೀಟರ್‌ ಸಾಮರ್ಥ್ಯದ ನೀರಿನ ತೊಟ್ಟಿ ಹೊಂದಿದ್ದು, ಇನ್ನು ಮುಂದೆ ಬಯಲು ಮೂತ್ರ ವಿಸರ್ಜನೆಯ ನಿಯಂತ್ರಣಕ್ಕೆ ಮಾರ್ಗೋಪಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.