ETV Bharat / city

ಮೇಯರ್-ಉಪಮೇಯರ್ ಆಯ್ಕೆಗೆ ಕ್ಷಣಗಣನೆ: ಯಾರಾಗ್ತಾರೆ ಹು-ಧಾ ಪಾಲಿಕೆಗೆ ಸಾರಥಿ?

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು 9 ತಿಂಗಳ ಬಳಿಕ ಮೇಯರ್ ಉಪಮೇಯರ್ ಚುನಾವಣೆಗೆ ಕಾಲ ಕೂಡಿ ಬಂದಿದೆ.‌

Mayor and Deputy Mayor Election Today In Hubli-Dharwad
ಮೇಯರ್, ಉಪಮೇಯರ್ ಆಯ್ಕೆಗೆ ಕ್ಷಣಗಣನೆ:ಪಾಲಿಕೆ ಆವರಣದಲ್ಲಿ ಸಕಲ ಸಿದ್ಧತೆ
author img

By

Published : May 28, 2022, 9:49 AM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರ ಕುತೂಹಲಕ್ಕೆ ಕಾರಣವಾಗಿರುವ ಬಹುನಿರೀಕ್ಷಿತ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಪಾಲಿಕೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು 9 ತಿಂಗಳ ಬಳಿಕ ಮೇಯರ್, ಉಪಮೇಯರ್ ಆಯ್ಕೆಗೆ ಕಾಲ ಕೂಡಿ ಬಂದಿದೆ. ಇಂದು ಅಧಿಕಾರ ಯಾರ ಕೈ ಸೇರಲಿದೆ ಎಂಬುದು ತೀರ್ಮಾನವಾಗಲಿದೆ. ಈ ಹಿನ್ನೆಲೆ ಪಾಲಿಕೆಯಿಂದ ಮೇಲ್ಮಹಡಿಯಲ್ಲಿರುವ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ. ವಾರ್ಡ್ ಮರು ವಿಂಗಡಣೆ ಬಳಿಕ ಪಾಲಿಕೆಗೆ 82 ಜನ ಚುನಾಯಿತ ಪ್ರತಿನಿಧಿಗಳು ಆಗಮಿಸುತ್ತಿದ್ದು, ಸುಮಾರು ವರ್ಷಗಳ ನಂತರ ಬಹು ನಿರೀಕ್ಷಿತ ಮೇಯರ್ ಉಪಮೇಯರ್ ಆಯ್ಕೆ ನಡೆಯುತ್ತಿದೆ.

ಬಿಜೆಪಿ ಸೇರ್ಪಡೆಯಾದ ಪಕ್ಷೇತರ ಸದಸ್ಯರು

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಪಕ್ಷೇತರ ಸದಸ್ಯರು: ಬಹುಮತ ಇದ್ದರೂ ಕೂಡ ಕಮಲ ಪಾಳೆಯ ಸಾಕಷ್ಟು ಸರ್ಕಸ್ ನಡೆಸಿದ್ದು, ಎರಡು ಜನ ಪಕ್ಷೇತರ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ನಿನ್ನೆ ರಾತ್ರಿ ಖಾಸಗಿ ಹೋಟೆಲ್​​ನಲ್ಲಿ ಸಭೆ ನಡೆಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ನೂತನ ಪಕ್ಷೇತರ ಸದಸ್ಯರಾದ ಕಿಶನ್ ಬೆಳಗಾವಿ, ಚಂದ್ರಿಕಾ ವೆಂಕಟೇಶ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

Mayor and Deputy Mayor Election Today In Hubli-Dharwad
ಬಿಜೆಪಿ ಸೇರ್ಪಡೆಯಾದ ಪಕ್ಷೇತರ ಸದಸ್ಯರು

ಈಗಾಗಲೇ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿಗೆ ಪಕ್ಕ ಆಗಿದ್ದು, ಮತ್ತಷ್ಟು ತಂತ್ರಗಾರಿಕೆ ಮೂಲಕ ತನ್ನ ಸ್ಥಾನವನ್ನು ಭದ್ರ ಪಡೆಸಿಕೊಳ್ಳಲು ಸಾಕಷ್ಟು ಚಿಂತನೆ ನಡೆಸಿದೆ. ಈಗಾಗಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಪಕ್ಷೇತರ ಸದಸ್ಯರು ಇಂದು ನಡೆಯಲಿರುವ ಹು-ಧಾ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಲಿಸಿದ್ದಾರೆ.

ಅಭ್ಯರ್ಥಿ ಘೋಷಣೆ ಮಾಡದ ಬಿಜೆಪಿ: ಹು-ಧಾ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಆಯ್ಕೆ ಕಸರತ್ತು ಮುಂದುವರೆದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಸಭೆ ನಡೆಸಿ, ಮೇಯರ್ ಯಾರಾಗಬೇಕು ಎಂಬ ಬಗ್ಗೆ ಸಭೆ ನಡೆಸಲಾಗಿದೆ.

Mayor and Deputy Mayor Election Today
ಬಿಜೆಪಿ ಸೇರ್ಪಡೆಯಾದ ಪಕ್ಷೇತರ ಸದಸ್ಯರು

ಪಾಲಿಕೆಯಲ್ಲಿ ಬಿಜೆಪಿ ಸರಳ ಬಹುಮತ ಹೊಂದಿದೆ. 82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ 39 ಸ್ಥಾನಗಳನ್ನ ಬಿಜೆಪಿ ಗೆದ್ದಿದೆ. ಇಬ್ಬರು ಪಕ್ಷೇತರರು ಬೆಂಬಲ ಸೂಚಿಸಿದ್ದು, ಸ್ಪಷ್ಟ ಬಹುತದ ಜತೆಗೆ ಆರು ಜನರ ಜನಪ್ರತಿನಿಧಿಗಳಿಗೆ ಮತದಾನಕ್ಕೆ ಅವಕಾಶವಿದೆ. ಬಹುಮತಕ್ಕೆ ಬೇಕಾಗಿರುವುದು ಮ್ಯಾಜಿಕ್ ನಂಬರ್ 42. ಆದ್ರೆ ಬಿಜೆಪಿ ಸ್ಪಷ್ಟವಾದ ಬಹುಮತ ಹೊಂದಿದ್ದು, ಅಂತಿಮವಾಗಿ ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳು ಘೋಷಣೆಯೊಂದೆ ಬಾಕಿ‌ ಉಳಿದಿದೆ.

ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಹುಬ್ಬಳ್ಳಿ- ಧಾರವಾಡ ಮೇಯರ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್​​ನಿಂದ ಮೇಯರ್ ಉಪಮೇಯರ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಮೇಯರ್ ಅಭ್ಯರ್ಥಿಯಾಗಿ ಮಯೂರ್ ಮೋರೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಶ್ರೀಮತಿ ದೀಪಾ ಸಂತೋಷ್ ನೀರಲಕಟ್ಟಿ ಅವರ ಹೆಸರನ್ನು ಘೋಷಣೆ ಮಾಡಿದೆ. ಈ‌ ಬಗ್ಗೆ ಕಾಂಗ್ರೆಸ್​​ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.