ETV Bharat / city

ಹುಬ್ಬಳ್ಳಿಯ ಬಾಲಮಂದಿರದಲ್ಲಿ ಮಾಸ್ಕ್​ ತಯಾರಿಸುತ್ತಿದ್ದಾರೆ ವಿದ್ಯಾರ್ಥಿನಿಯರು! - ಕೊರೊನಾ ವೈರಸ್ ಭೀತಿ

ಮಾಸ್ಕ್​​​​ಗೆ ಬೇಡಿಕೆ ಹೆಚ್ಚಿದ ಪರಿಣಾಮ ಬಾಲಮಂದಿರದ ಬಾಲಕಿಯರು ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Mask making in bala mandira
Mask making in bala mandira
author img

By

Published : Apr 9, 2020, 9:43 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್​​​​ಗೆ ಬೇಡಿಕೆ ಹೆಚ್ಚಿದ್ದು, ಬಾಲಮಂದಿರದ ಬಾಲಕಿಯರು ಸ್ವಯಂ ಪ್ರೇರಿತವಾಗಿ ಮಾಸ್ಕ್ ತಯಾರಿಸುವ ಮೂಲಕ ಮಾದರಿಯಾಗಿದ್ದಾರೆ.

ಹುಬ್ಬಳ್ಳಿಯ ಘಂಟಿಕೇರಿಯ ಬಾಲಮಂದಿರದಲ್ಲಿ ಬಹುತೇಕರನ್ನು ಮನೆಗೆ ಕಳುಹಿಸಲಾಗಿದೆ. ಉಳಿದಿರುವ ವಿದ್ಯಾರ್ಥಿನಿಯರು ಈ ಸೇವೆಯಲ್ಲಿ ತೊಡಗಿದ್ದಾರೆ. ಪ್ರತಿದಿನ 150ಕ್ಕೂ ಹೆಚ್ಚು ಮಾಸ್ಕ್ ತಯಾರಿಸಲಾಗುತ್ತಿದೆ. ಈವರೆಗೆ 5 ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಸಿದ್ದಾರೆ.

ಮಾಸ್ಕ್​ ತಯಾರಿಸುವ ಕಾರ್ಯದಲ್ಲಿ ತೊಡಗಿದ ಬಾಲಕಿಯರು

ಹುಬ್ಬಳ್ಳಿ-ಧಾರವಾಡ ಪೊಲೀಸರು, ಬಡಜನರು, ಪೌರಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್ ಹಂಚಿಕೆ ಮಾಡುತ್ತಿದ್ದಾರೆ. ತಂದೆ ತಾಯಿಗಳಿಲ್ಲದೆ ಬಾಲಮಂದಿರದಲ್ಲಿರುವ ವಿದ್ಯಾರ್ಥಿನಿಯರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.