ಹುಬ್ಬಳ್ಳಿ: 27ನೇ ವರ್ಷದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ರೇಣುಕಾಭಕ್ತರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಗೋಕುಲ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ನಿಂದ, ನಗರದ ಮೈಲಾರಲಿಂಗೇಶ್ವರ ನಗರದ ನಂದ ಗೋಕುಲ ರಸ್ತೆಯಲ್ಲಿ ಅತೀ ವಿಜೃಂಭಣೆಯಿಂದ ಜಾತ್ರೆ ನಡೆದಿದೆ. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಯಲ್ಲಮ್ಮದೇವಿಗೆ ಪಂಚಾಮೃತ ಅಭಿಷೇಕ ಮಾಡಿದ ನಂತರ, ಮಹಾಮಂಗಳಾರತಿಯನ್ನು ನೆರವೇರಿಸಲಾಯ್ತು. ಕುಂಭ ಪೂಜೆ ಸಲ್ಲಿಸಿ, ಪಲ್ಲಕ್ಕಿ ಉತ್ಸವ ಮತ್ತು ಕುಂಭವಾದ್ಯ ಮೇಳಗಳೊಂದಿಗೆ ಜಾಡರ ಮನೆಗೆ ತೆರಳಿ, ಉಡಿ ತುಂಬಿಕೊಂಡು ಉತ್ಸವ ಮೂರ್ತಿ ಮೆರವಣಿಗೆ ಮಾಡಿದರು.
ನಂತರ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಗುರುಪೀಠದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ, ಗೋಕುಲದ ಹಾಲಯ್ಯಸ್ವಾಮಿ ಹಿರೇಮಠ, ಗಂಗಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯದಲ್ಲಿ ಪ್ರವಚನ ಸಹ ಜರುಗಿತು.
ಇದನ್ನೂ ಓದಿ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಬಹಿಷ್ಕರಿಸಿದ ಬಿಎಸ್ಪಿ..!