ಹುಬ್ಬಳ್ಳಿ : ಸಚಿವ ಶಿವಳ್ಳಿ ಅತ್ಯಂತ ಸರಳ ಮತ್ತು ಸಜ್ಜನ ರಾಜಕಾರಣಿ. ಸಚಿವರಾದರೂ ಅಧಿಕಾರದ ಬಗ್ಗೆ ವ್ಯಾಮೋಹ ಇರಲಿಲ್ಲ ಎಂದು ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಿವಳ್ಳಿ ಅವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಅವರು ನಮ್ಮಿಂದ ಅಗಲುವಂತಾಯಿತು. ಅವರು ನನಗಿಂತಲೂ ಎರಡು ವರ್ಷ ಅಷ್ಟೆ ದೊಡ್ಡವರು. ಅವರ ಅಗಲಿಕೆ ನನಗೆ ನೋವು ತಂದಿದೆ ಎಂದರು.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದರು.