ETV Bharat / city

ಲಾಕ್​​ಡೌನ್​​ ಎಫೆಕ್ಟ್​​: ಕೋಟ್ಯಂತರ ರೂಪಾಯಿ ನಷ್ಟದ ಸುಳಿಯಲ್ಲಿ ಜವಳಿ ಉದ್ಯಮ

ಲಾಕ್​​ಡೌನ್​ನಿಂದಾಗಿ ಜವಳಿ ಮಾರುಕಟ್ಟೆ ತಲ್ಲಣಗೊಂಡಿದೆ. ಪ್ರತಿ ವರ್ಷದಂತೆ ಈ ಸಮಯದಲ್ಲಿ ಶುಭ ಕಾರ್ಯಗಳು, ಹಬ್ಬಗಳಿಗಾಗಿ ಜನತೆ ಜವಳಿ ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ ಕೊರೊನಾದಿಂದಾಗಿ ಜವಳಿ ಉದ್ಯಮವೇ ಬಂದ್ ಆಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

Lockdown Effect: The textile industry is losing billions of rupees
ಲಾಕ್​​ಡೌನ್​​ ಎಫೆಕ್ಟ್​​: ಕೋಟ್ಯಂತರ ರೂಪಾಯಿ ನಷ್ಟದ ಸುಳಿಯಲ್ಲಿ ಜವಳಿ ಉದ್ಯಮ
author img

By

Published : May 12, 2020, 10:06 PM IST

ಹುಬ್ಬಳ್ಳಿ: ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ದೇಶದ ಎಲ್ಲಾ ಉದ್ಯಮಗಳು ನಷ್ಟಕ್ಕೆ ಸಿಲುಕಿವೆ. ಈ ನಡುವೆ ಜವಳಿ ಉದ್ಯಮ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಏಪ್ರಿಲ್​​, ಮೇ ತಿಂಗಳಲ್ಲಿ ಶುಭ ಕಾರ್ಯಕ್ಕೆಂದು ಜವಳಿ ವ್ಯಾಪಾರ ಭರ್ಜರಿಯಾಗಿ ನಡೆಯಬೇಕಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ವ್ಯಾಪಾರಸ್ಥರ ನಿರೀಕ್ಷೆ ಹುಸಿಯಾಗಿದೆ. ಪರಿಣಾಮ ಕೋಟಿಗೂ ಅಧಿಕ ನಷ್ಟ ಅನುಭವಿಸುವಂತೆ ಮಾಡಿದೆ.

ಇನ್ನು ಉದ್ಯೋಗವಿಲ್ಲದೇ ಸಾವಿರಾರು ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಹ ಬೀದಿಗೆ ಬಂದಿದ್ದಾರೆ. ಬಹಳ ಕಾಲದಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಪ್ರಮುಖ ಜವಳಿ ವ್ಯಾಪಾರದ ಕೇಂದ್ರವಾಗಿದೆ. ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಮಾತ್ರವಲ್ಲದೆ ಮಂಗಳೂರಿನವರೆಗೂ ಇಲ್ಲಿನ ಬಟ್ಟೆ ವ್ಯಾಪರ ಹಬ್ಬಿದೆ. ಇತರ ಜಿಲ್ಲೆಗಳ ವ್ಯಾಪಾರಿಗಳು ಕೂಡ ಇಲ್ಲಿಂದಲೇ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಅದರಲ್ಲೂ ಮಾರ್ಚ್​​ ನಂತರದ ಎರಡು ತಿಂಗಳು ಮದುವೆ ಸಮಯ ಹಾಗೂ ರಜಾ ಸಂದರ್ಭ. ಜೊತೆಗೆ ರಂಜಾನ್ ಸೇರಿರುವ ಕಾರಣ ಬಟ್ಟೆ ವ್ಯಾಪಾರಕ್ಕೆ ಸುಸಂದರ್ಭ. ಆದರೆ ಕೊರೊನಾ ಹಾವಳಿಯಿಂದ ಜವಳಿ ಉದ್ಯಮ ನಲುಗುವಂತಾಗಿದೆ.

ಇನ್ನು ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಜವಳಿ ಅಂಗಡಿಗಳು ಲಾಕ್​​ಡೌನ್​​ನಿಂದ ಬಂದ್ ಆಗಿದ್ದು, ನಷ್ಟ ಅನುಭವಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.