ಹುಬ್ಬಳ್ಳಿ: ನಿಸರ್ಗ ಚಂಡಮಾರುತದ ಪರಿಣಾಮ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು ನಗರದ ಚರಂಡಿ, ಕೆರೆ,ಕಟ್ಟೆಗಳಿಗೆ ಅಗಾಧ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕುಂದಗೋಳ ಪಟ್ಟಣದ ಬಸ್ ನಿಲ್ದಾಣ ಹಾಗೂ ಪಟ್ಟಣದ ಗಾಳಿ ಮಾರಮ್ಮದೇವಿ ದೇವಸ್ಥಾನದ ಮುಖ್ಯ ರಸ್ತೆಯಿಂದ ಹರಿದು ಬರುವ ಚರಂಡಿ ನೀರು ತೋರಣಗಟ್ಟಿ ಕೆರೆಗೆ ಸಂಗ್ರಹವಾಗುತ್ತಿದೆ. ಇದರಿಂದ ಸ್ಥಳೀಯರು ಓಡಾಟಕ್ಕೆ ತೊಂದರೆಯಾಗಿದ್ದು,ಇದನ್ನ ಗಮನಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾರಾಯಣ ಡೊಂಬರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದ ಅವರು,ಚರಂಡಿ ಮಣ್ಣಿನಿಂದ ಹುದುಗಿ ಹೋಗಿರುವ ಪರಿಣಾಮ ಈ ತೊಂದರೆ ಉಂಟಾಗಿದೆ. ಚರಂಡಿಗಳನ್ನ ಸ್ವಚ್ಚಗೊಳಿಸಿ,ತೋರಣಗಟ್ಟಿ ಕೆರೆ ನೀರು ಹರಿದು ಹೋಗಲು ಕಾಲುವೆ ಕೆಲಸ ಮಾಡಿಸುತ್ತೇನೆ ಎಂದರು.