ಹುಬ್ಬಳ್ಳಿ : ಕೊರೊನಾ 2ನೇ ಅಲೆಯಲ್ಲಿ ನಾವೆಲ್ಲ ಸಿಕ್ಕಿಕೊಂಡಿದ್ದೇವೆ. ದೇಶದಲ್ಲಿ ಇದರಿಂದ ಬಚಾವ್ ಆಗಲು ಕಾಂಗ್ರೆಸ್ ಎಲ್ಲ ರೀತಿಯ ಸಹಕಾರ ಕೊಡುತ್ತಿದೆ.
ಎಲ್ಲರ ಸಹಕಾರದ ಮೂಲಕ ಜನ ಉಳಿಯಬೇಕು ಅನ್ನೋದೇ ನಮ್ಮ ಆಶಯ. ಕೊರೊನಾಗೆ ಯಾವುದೇ ಜಾತಿ-ಧರ್ಮ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಓದಿ: COVID 19 update: ರಾಜ್ಯದಲ್ಲಿಂದು 20,378 ಮಂದಿಗೆ ಸೋಂಕು ದೃಢ, 382 ಜನ ಬಲಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೀಯತೆ ದೃಷ್ಟಿಯಿಂದ ನಾವು ಸಹಕಾರ ಕೊಡುತ್ತಿದ್ದೇವೆ. ನಮ್ಮ ಕಾರ್ಯಕರ್ತರ ಸೇವೆಯನ್ನ ಗುರುತಿಸಿ, ಗೌರವ ಕೊಡಬೇಕು ಅಂತ ನಾನಿಲ್ಲಿ ಬಂದಿದ್ದೇನೆ ಎಂದರು.
ಅರ್ಚಕರು, ಆಟೋ ಡ್ರೈವರ್‌ಗಳು ನನ್ನ ಬಳಿ ನೋವನ್ನ ತೋಡಿಕೊಂಡಿದ್ದಾರೆ. ನಮ್ಮ ಜನರ ನೋವಿಗೆ, ಲಕ್ಷಾಂತರ ಮಂದಿ ಸಾವನ್ನ ನಾವು ನೋಡುತ್ತಿದ್ದೇವೆ. ಆದರೆ, ಕೊರೊನಾ ಎರಡನೇ ಅಲೆಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆ ಆಗಿದೆ.
ನಾವು ನಮ್ಮ ಕಣ್ಣಲ್ಲಿ, ಕಿವಿಯಲ್ಲಿ ಫೋನ್ ಎತ್ತಿದರೆ ಬರಿ ಸಾವು ಎಂದು ಸುದ್ದಿ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಫೋನ್ ಎತ್ತಲು ಆಗದ ಸ್ಥಿತಿ ಎದುರಾಗಿದೆ.
ಇದು ಕೇವಲ ಬಿಜೆಪಿ, ಕಾಂಗ್ರೆಸ್ ಮಾತ್ರ ಅಲ್ಲ, ರಾಜ್ಯ ಮತ್ತು ದೇಶದಲ್ಲಿ ಆಗುತ್ತಿದೆ. ಯಾಕೆ ಇಷ್ಟೊಂದು ಸಾವಾಯ್ತು ಎನ್ನೋದಕ್ಕೆ ಗೊತ್ತಿಲ್ಲ. ಈಗಿನ ಸರ್ಕಾರ ಸಾವಿನ ಸಂಖ್ಯೆ ಹೆಚ್ಚಾದರೂ ಕಡಿಮೆ ಸಂಖ್ಯೆಯನ್ನ ಹೇಳುತ್ತಿದ್ದಾರೆ.
ಕಾಂಗ್ರೆಸ್‌ನ ಎಂಎಲ್ಎ, ಎಂಎಲ್ಸಿಗಳೆಲ್ಲ 100 ಕೋಟಿ ರೂ. ಕೊಡಲು ಸಿದ್ಧರಾಗಿದ್ದೇವೆ. ನಾವು ಪಾರದರ್ಶಕವಾಗಿರುತ್ತೇವೆ, ಲಸಿಕೆ ಚುಚ್ಚಲು ಖರ್ಚು ಬೇಡ.
ಆದರೆ, ಯಡಿಯೂರಪ್ಪನವರಿಗೆ ಈಗಲೂ ಕೇಳುತ್ತಿದ್ದೇವೆ ಪರ್ಮಿಷನ್ ಕೊಡುತ್ತಿಲ್ಲ. ಸರ್ಕಾರ ನಮಗೆ ಯಾಕೆ ಲಸಿಕೆ ನೀಡಲು ಕೊಡುತ್ತಿಲ್ಲ ಎಂದು ಅನುಮಾನ ಬರುತ್ತಿದೆ ಎಂದರು.