ETV Bharat / city

ಹುಬ್ಬಳ್ಳಿ ಕಿಮ್ಸ್​ನಲ್ಲಿ 3.35 ಲಕ್ಷಕ್ಕೂ ಅಧಿಕ ಕೋವಿಡ್ ತಪಾಸಣೆ - ಹುಬ್ಬಳ್ಳಿ ಕಿಮ್ಸ್​

ಹುಬ್ಬಳ್ಳಿ ಕಿಮ್ಸ್ ಕೋವಿಡ್ ತಪಾಸಣೆ ಪ್ರಯೋಗಾಲಯದಲ್ಲಿ 24 ಗಂಟೆ ಒಳಗಾಗಿ ವರದಿಗಳನ್ನು ನೀಡುತ್ತಿದ್ದು, ದಿನ ಒಂದಕ್ಕೆ 2000 ಪರೀಕ್ಷೆಗಳ ಗುರಿಯನ್ನು ಕಿಮ್ಸ್ ನೀಡಲಾಗಿದೆ.

KIMS
KIMS
author img

By

Published : May 17, 2021, 10:47 PM IST

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಕೋವಿಡ್ ತಪಾಸಣೆ ಪ್ರಯೋಗಾಲಯದಲ್ಲಿ ಕೋವಿಡ್ ಪ್ರಾರಂಭದಿಂದ ಮೇ.17 ವರೆಗೆ 3,36,518 ಮಾದರಿಗಳು ಕೋವಿಡ್ ತಪಾಸಣೆಗಾಗಿ ಸಲ್ಲಿಕೆಯಾಗಿವೆ.

ಇದರಲ್ಲಿ 3,35,132 ಮಾದರಿಗಳ ತಪಾಸಣೆ ನಡೆಸಿ ವರದಿಗಳನ್ನು ನೀಡಲಾಗಿದೆ. ಪ್ರಯೋಗಾಲಯದಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಹಾವೇರಿ, ಬಿಜಾಪುರ, ಬೆಳಗಾವಿ, ದಾವಣಗೆರೆ, ಕಲ್ಬುರ್ಗಿ, ಬಳ್ಳಾರಿ, ಕಾರವಾರ, ಉಡುಪಿ ಜಿಲ್ಲೆಯ ಮಾದರಿಗಳನ್ನು ಸಹ ಪರೀಕ್ಷಿಸಿ ವರದಿ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ 2,83,080 ಮಾದರಿಗಳು ಹಾಗೂ ಇತರ ಜಿಲ್ಲೆಯ 52,052 ಮಾದರಿಗಳನ್ನು ಇದುವರೆಗೆ ಪರೀಕ್ಷೆ ವರದಿ ನೀಡಲಾಗಿದೆ. 24 ಗಂಟೆ ಒಳಗಾಗಿ ವರದಿಗಳನ್ನು ನೀಡುತ್ತಿದ್ದು, ದಿನ ಒಂದಕ್ಕೆ 2000 ಪರೀಕ್ಷೆಗಳ ಗುರಿಯನ್ನು ಕಿಮ್ಸ್ ನೀಡಲಾಗಿದೆ.

ಸದ್ಯ ಜಿಲ್ಲಾಡಳಿತದಿಂದ ಸರಾಸರಿ 1600 ಮಾದರಿಗಳನ್ನು ತಪಾಸಣೆಗಾಗಿ ಕಳುಹಿಸಿಕೊಡುತ್ತಿದ್ದು, ನಿಗದಿತ ಸಮಯದಲ್ಲಿ ವರದಿ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ತಪಾಸಣೆ ಪ್ರಯೋಗಾಲಗಳು ಇಲ್ಲದ ಸಂದರ್ಭದಲ್ಲಿ 4 ಸಾವಿರಕ್ಕೂ ಅಧಿಕ ಮಾದರಿಗಳ ತಪಾಸಣೆ ನಡೆಸಿ ವರದಿ ನೀಡಲಾಗಿದೆ ಎಂದು ಮೈಕ್ರೋಬಯಾಲಜಿ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ.ಮಹೇಶ್‌ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.