ETV Bharat / city

ಮುಂಗಾರು ಬೆಳೆಗಳಿಗೆ ಹುಳುಗಳ ಕಾಟ: ಧಾರವಾಡ ರೈತರು ಕಂಗಾಲು

ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಆರ್ಭಟದಿಂದ ಮುಂಗಾರು ಬೆಳೆಗಳಿಗೆ ಹುಳುಗಳ ಕಾಟ ಶುರುವಾಗಿದೆ. ಇದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.

dharwad
ಮುಂಗಾರು ಬೆಳೆಗಳಿಗೆ ಹುಳುಗಳ ಕಾಟ
author img

By

Published : Jul 17, 2021, 10:09 AM IST

ಧಾರವಾಡ: ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಹೆಸರು, ಹತ್ತಿ, ಗೋವಿನ ಜೋಳ ಬೆಳೆಗಳಿಗೆ ಗೊಬ್ಬರದ ಹುಳುಗಳ ಕಾಟ ಶುರುವಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರನ್ನು ಕೀಟಗಳು ಕಂಗಾಲಾಗಿಸಿವೆ.

ಮುಂಗಾರು ಬೆಳೆಗಳಿಗೆ ಹುಳುಗಳ ಕಾಟ

ಹೌದು, ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ರೈತ ಗುರುನಾಥ ಶೆಟ್ಟರ್ ಹಾಗೂ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ಗೊಬ್ಬರದ ಹುಳುಗಳು ಕಂಡುಬಂದಿವೆ.

ರೈತರು ಮೊದಲು ಹೆಸರು ಬಿತ್ತನೆ ಮಾಡಿದ್ದರು. ಆದರೆ, ಹೆಸರು ಬೆಳೆ ಬಾರದಿದ್ದಾಗ ಗೋವಿನ‌ಜೋಳ‌ ಮರುಬಿತ್ತನೆ ಮಾಡಿದರು. ಅದು ಸಹ ಅಲ್ಲೇ ಒಣಗಿ ಹೋಗಿತ್ತು. ಇದರಿಂದ ಆತಂಕಕ್ಕೊಳಗಾದ ರೈತರು ಜಮೀನು ಅಗೆದು ನೋಡಿದಾಗ ಹುಳುಗಳು ಕಂಡುಬಂದಿವೆ.

ಇದರಿಂದ ಜಿಲ್ಲೆಯ ರೈತರಿಗೆ ಮುಂಗಾರು ಕೈಕೊಡುವ ಭೀತಿ ಎದುರಾಗಿದ್ದು, ಸರ್ಕಾರ ತಮಗೆ ಪರಿಹಾರ ನೀಡುವಂತೆ ಅನ್ನದಾತರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಯ್ಯಪ್ಪನ ದೇಗುಲಕ್ಕೆ ಅರ್ಚಕರ ನೇಮಕ ವಿಚಾರ: TDB ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಪೂಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.