ಹುಬ್ಬಳ್ಳಿ: ಪೊಲೀಸ್ ಸುಪರ್ದಿಯಲ್ಲಿ ಇರುವಾಗಲೇ ಅತ್ಯಾಚಾರ ಆರೋಪಿಗೆ ಅಪ್ರಾಪ್ತ ಬಾಲಕಿಯ ಸಂಬಂಧಿ ಚಾಕು ಇರಿದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಮೃತಪಟ್ಟಿದ್ದಾನೆ.
ಫಕ್ರುದ್ದಿನ್ ನಧಾಫ್ (56) ಮೃತಪಟ್ಟ ಅತ್ಯಾಚಾರ ಆರೋಪಿ. ನವಲಗುಂದದಲ್ಲಿ ಫಕ್ರುದ್ದಿನ್ ನಧಾಫ್, ಅಪಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಸ್ಥಳಿಯರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರ ಸುಪರ್ದಿಯಲ್ಲಿ ಇರುವಾಗ ಸಂತ್ರಸ್ತ ಬಾಲಕಿಯ ಸಂಬಂಧಿ ಆರೋಪಿಗೆ ಚಾಕುವಿನಿಂದ ಇರಿದಿದ್ದಾನೆ.
ತೀವ್ರವಾಗಿ ಗಾಯಗೊಂಡ ಅತ್ಯಾಚಾರ ಆರೋಪಿಯನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.